ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು : ಜನಪದ ಸಾಹಿತ್ಯ ಸಂಭ್ರಮ. ಕವಿಗೋಷ್ಟಿ

ಕಟೀಲು: ಜನಪದ ಸಾಹಿತ್ಯದ ಓದುವಿಕೆ ಗ್ರಾಮೀಣ ಸೊಡಗಿನ ಬೆರಗು ಬದುಕಿನ ನೋಟಗಳನ್ನು ಕೊಡಬಲ್ಲದು. ಸಾಹಿತ್ಯದ ಓದು ಮನೋಲ್ಲಾಸವನ್ನು ತರುವಂತಹದ್ದು ಎಂದು ಬೆಸೆಂಟ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕದ ಸಹಯೋಗದಲ್ಲಿ ನಡೆದ ಜನಪದ ಸಾಹಿತ್ಯ ಸಂಭ್ರಮ ಹಾಗೂ ವಿದ್ಯಾರ್ಥಿ ಕವಿಗೋಷ್ಟಿಯಲ್ಲಿ ಮಾತನಾಡಿದರು.

ಕವಿಗೋಷ್ಟಿಯಲ್ಲಿ ಶ್ರೇಯಾ ರೇಷ್ಮಾ, ಶ್ರೀವೃಂದಾ, ಆದಿತ್ಯೇಯ, ರಶ್ಮಿ, ಪ್ರತೀಕ್ಷಾ. ಕಾರ್ತಿಕ್ ಕಾಮತ್. ವೈಷ್ಣವಿ. ಮಂಜುನಾಥ್, ಲಕ್ಷ್ಮೀಪತಿ ಕವನಗಳನ್ನು ವಾಚಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಕೃಷ್ಣ, ಮೂಲ್ಕಿ ಕಸಾಪ ಘಟಕದ ಅಧ್ಯಕ್ಷೆ ಗಾಯತ್ರೀ ಉಡುಪ ವೇದಿಕೆಯಲ್ಲಿದ್ದರು. ಉಪನ್ಯಾಸಕಿ ಡಾ. ಎಚ್.ಬಿ ಸುನೀತಾ ನಿರೂಪಿಸಿದರು. ಉಪನ್ಯಾಸಕಿ ರೇಷ್ಮಾ ಸ್ವಾಗತಿಸಿದರು. ಸಂತೋಷ ಆಳ್ವ ವಂದಿಸಿದರು.

Edited By : PublicNext Desk
Kshetra Samachara

Kshetra Samachara

06/06/2022 06:53 pm

Cinque Terre

1.61 K

Cinque Terre

0

ಸಂಬಂಧಿತ ಸುದ್ದಿ