ಮುಲ್ಕಿ: ಮುಲ್ಕಿ ಸಮೀಪದ ಕೆರೆಕಾಡು ನಿವಾಸಿ ತನುಶ್ರೀ ಎ. ಕೋಟ್ಯಾನ್ ರವರು ಉಡುಪಿ ಅಂಬಲಪಾಡಿಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಕರಾಟೆ ಶಿಕ್ಷಣವನ್ನು ನೀಡುತ್ತಿರುವ ನಾಗರಾಜ್ ಕುಲಾಲ್ ಮಾರ್ಗದರ್ಶದಲ್ಲಿ ತರಬೇತಿಯನ್ನು ಪಡೆದಿದ್ದು ಕಠಿಣ ಸ್ಪರ್ಧೆಯಲ್ಲಿ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಅವಳಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ತನುಶ್ರೀ ಇತ್ತೀಚೆಗೆ ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಮುಲ್ಕಿ ಜನ ವಿಕಾಸ ಸಮಿತಿಯ ಸಹಕಾರದಲ್ಲಿ ಸಂಯೋಜಿಸಿದ್ದ ಪ್ರತಿಭಾ ಸೌರಭ-2021ನೇ ಸಾಲಿನ ಕಟೀಲಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾರೆ.
ಯಕ್ಷಗಾನದಲ್ಲಿಯೂ ತನ್ನ ಸಾಧನೆಯ ಮೂಲಕ ಯಕ್ಷರಂಗದಲ್ಲಿ ಗಮನ ಸೆಳೆದಿದ್ದಾರೆ. ಕಿನ್ನಿಗೋಳಿಯ ಪ್ರಸಿದ್ದ ಉದ್ಯಮಿ ತನು ಎಲೆಕ್ನಿಕಲ್ ನ ಮಾಲೀಕ ಹಾಗೂ ಸಮಾಜ ಸೇವಕ ಅಜಿತ್‌ಕುಮಾರ್ ಕೆರೆಕಾಡು ಹಾಗೂ ಶ್ರೀಮತಿ ಯಶೋಧಾ ಸಾಲ್ಯಾನ್ ರವರ ಪುತ್ರಿ.
Kshetra Samachara
26/05/2022 09:06 pm