ಮುಲ್ಕಿ: ಮುಲ್ಕಿ ಸಮೀಪದ ಕೊಲಕಾಡಿ ಶ್ರೀ ಕುಂಜಾರಗಿರಿ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನದಲ್ಲಿ "ಸಗ್ರಾಮಕ ಶನಿಶಾಂತಿ" ಪೂಜೆ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಹಾಗೂ ಅರ್ಚಕ ಶ್ರೀಕಾಂತ್ ಭಟ್ ಕೊಲಕಾಡಿ ನೇತೃತ್ವದಲ್ಲಿ ಭಕ್ತಿಭಾವದಿಂದ ನೆರವೇರಿತು.
ಈ ಸಂದರ್ಭ ವಾದಿರಾಜ ಉಪಾಧ್ಯಾಯ ಆಶೀರ್ವಚನ ನೀಡಿ ಶನಿ ಗ್ರಹನು ಮಕರ ರಾಶಿಯಿಂದ ಕುಂಭರಾಶಿಗೆ ಪ್ರವೇಶಿಸುವಾಗ ಕೆಲವು ರಾಶಿಯವರಿಗೆ ಬರುವ ಅರಿಷ್ಟ ಗಳ ನಿವಾರಣೆಗೆ ಹಾಗೂ ಲೋಕದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲುಸಂಗ್ರಾಮಕ ಶನಿಶಾಂತಿ ಪೂಜೆ ಪೂರಕ ಎಂದರು. ಬಳಿಕ ಮಹಾಪೂಜೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ನಡೆಯಿತು
ಶಾಸಕ ಉಮಾನಾಥ ಕೋಟ್ಯಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಅರ್ಚಕ ವೃಂದ, ಕುಂಜಾರುಗಿರಿ ಸೇವಾ ಯುವಕ ಸಂಘ, ಮಹಿಳಾ ಮಂಡಳಿ, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
30/04/2022 07:54 pm