ಸುರತ್ಕಲ್:ಕಳೆದ ಬಾರಿ ವಿಧಾನಸಭಾ ಚುನಾವಣಾ ಸಮಯದಲ್ಲಿ ಡಾ.ಭರತ್ ಶೆಟ್ಟಿಯವರು ಗುಡ್ಡೆಕೊಪ್ಲ, ಇಡ್ಯಾ ತಗ್ಗು ಶ್ರೀ ಸತ್ಯ ಜಾರಂದಾಯ ಮತ್ತು ಪರಿವಾರ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದಾಗ ದೈವದರ್ಶನದಲ್ಲಿ ಡಾ.ಭರತ್ ಶೆಟ್ಟಿಯವರಿಗೆ "ತಾವು ಚುನಾವಣೆಯಲ್ಲಿ ಗೆದ್ದು ಶಾಸಕರಾಗುತ್ತೀರಿ. ಶಾಸಕರಾದ ಬಳಿಕ ದೈವಸ್ಥಾನಕ್ಕೆ ದೈವದ ಕೊಡಿಯಡಿ ನಿರ್ಮಿಸಿಕೊಡಲು ಸಂಕಲ್ಪ ಮಾಡಬೇಕು" ಎಂದು ದೈವನುಡಿಯಲ್ಲಿ ಆರ್ಶೀವಾದ ಮಾಡಲಾಗಿತ್ತು.
ಆ ಬಳಿಕ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ದೈವದ ನುಡಿಯಂತೆ ದೈವಸ್ಥಾನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ನೂತನ ಕೊಡಿಯಡಿಯನ್ನು ಸಮರ್ಪಿಸಿದ್ದಾರೆ.
ಪುಷ್ಪಲತಾ ಎನ್.ಸಾಲ್ಯಾನ್, ಪುತ್ರ ಶರತ್ ಎನ್.ಸಾಲ್ಯಾನ್ , ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ನಯನ ಆರ್.ಕೋಟ್ಯಾನ್ (ಸುರತ್ಕಲ್ ಪಶ್ಚಿಮ 7ನೇ ವಾರ್ಡ್) ಹಾಗೂ ಗುಡ್ಡೆಕೊಪ್ಲ ಮೊಗವೀರ ಸಭಾದ ಅಧ್ಯಕ್ಷ ಕೇಶವ ಕುಂದರ್, ಉಪಾಧ್ಯಕ್ಷರಾದ ಕುಮಾರ್ ಸಾಲ್ಯಾನ್, ಭಾಸ್ಕರ ಗುರಿಕಾರ್, ಕಿಶೋರ್ ಗುರಿಕಾರರು ಹಾಗೂ ಕ್ಷೇತ್ರಾಡಳಿತ ಸಮಿತಿಯ ಸದಸ್ಯರುಗಳಾದ ಪ್ರಭಾಕರ ಪೂಜಾರಿ,ಪದ್ಮನಾಭ ಪೂಜಾರಿ ಹಾಗೂ ಊರ ಸದಸ್ಯರುಗಳು ಉಪಸ್ಥಿತರಿದ್ದರು.
Kshetra Samachara
30/04/2022 02:41 pm