ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಸೈನಿಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

ಸುರತ್ಕಲ್: ನವರಂಗ್ ಫ್ರೆಂಡ್ಸ್ ಸರ್ಕಲ್ ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ ನವರಂಗ್ ಪ್ರೀಮಿಯರ್ ಲೀಗ್-2022 ಕ್ರಿಕೆಟ್ ಪಂದ್ಯಾಟ ಕೃಷ್ಣಾಪುರದ ಚಕ್ರವರ್ತಿ ಮೈದಾನದಲ್ಲಿ ಶನಿವಾರ ಆರಂಭಗೊಂಡಿತು.

ಸಭೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಅವರು, "ಆಯ್ದ ಆಟಗಾರರ ಆರು ತಂಡಗಳ ಮಧ್ಯೆ ಪಂದ್ಯಾಟ ಜರುಗಲಿದ್ದು ಪ್ರಥಮ ಸ್ಥಾನದಲ್ಲಿ ವಿಜೇತ ತಂಡಕ್ಕೆ 33,333 ರೂ. ನಗದು ಹಾಗೂ ಎನ್ ಪಿ ಎಲ್ ಟ್ರೋಫಿ ಹಾಗೂ ದ್ವಿತೀಯ ತಂಡಕ್ಕೆ 22,222 ರೂ. ನಗದು ಹಾಗೂ ಎನ್ ಪಿ ಎಲ್ ಟ್ರೋಫಿ ಬಹುಮಾನವಾಗಿ ನೀಡಲಾಗುವುದು. ಸಂಸ್ಥೆಯು ಕಳೆದ 19 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದು 15 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಅನಾರೋಗ್ಯ ಪೀಡಿತರಿಗೆ ನೆರವು ನೀಡಲಾಗಿದೆ.

ಈ ಬಾರಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ ಹಾಗೂ ಇಬ್ಬರು ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ." ಎಂದರು.

ಮನಪಾ ಸದಸ್ಯ ಸಂಶಾದ್ ಅಬೂಬಕರ್, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಪೂಜಾರಿ, ಪಮ್ಮಿ ಕೊಡಿಯಾಲ್ ಬೈಲ್, ಯಜ್ನೇ ಶ್ ಕರ್ಕೇರ, ತಿಲಕ್, ಶಿವಪ್ರಸಾದ್ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು. ಸಮಾರಂಭದಲ್ಲಿ ನಿವೃತ್ತ ಸೈನಿಕ ಲೀಲಾಧರ್ ಕಡಂಬೋಡಿ ರವರನ್ನು ಸನ್ಮಾನಿಸಲಾಯಿತು. ಬಳಿಕ ಕ್ರಿಕೆಟ್ ಪಂದ್ಯಾಟ ನಡೆಯಿತು.

Edited By : PublicNext Desk
Kshetra Samachara

Kshetra Samachara

26/02/2022 07:15 pm

Cinque Terre

2.02 K

Cinque Terre

0

ಸಂಬಂಧಿತ ಸುದ್ದಿ