ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ: 10, 11ರಂದು ಕಾಳೆಕಾಟ್ ಉತ್ಸವ; "ದಯವಿಟ್ಟು ಯಾರೂ ಬರಬೇಡಿ": ಸಂಘಟಕರ ವಿನಂತಿ

ಮಂಗಳೂರು: ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿಗೆ ಸಮೀಪದ ಕಾಳೆಕಾಟ್ ನಲ್ಲಿ ಜನವರಿ 10 ಮತ್ತು 11 ರಂದು ನಡೆಯಲಿರುವ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಳ್ಳಲು ಯಾರೂ ಬರಬಾರದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನೇಕ ಶತಮಾನಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿರುವ ಮಲಬಾರ್ ನ ಈ ಪ್ರತಿಷ್ಠಿತ ತೆಯ್ಯಮ್ ನಲ್ಲಿ ಕೊಡಗು, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಿಂದ ನೂರಾರು ಮಂದಿ ಭಾಗವಹಿಸುತ್ತಾರೆ. ಮೂರು ದಿನಗಳ ಈ ಸಂಭ್ರಮದಲ್ಲಿ ದೇಶ-ವಿದೇಶಗಳ ಜಾನಪದ ಸಂಶೋಧಕರು ಪಾಲ್ಗೊಳ್ಳುತ್ತಾರೆ.

ಆದರೆ, ಕೋವಿಡ್ ಕಾರಣದಿಂದಾಗಿ ಇಂತಹ ಉತ್ಸವದಲ್ಲಿ ಜನ ಸೇರಲೇ ಬಾರದೆಂದು ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿದೆ. ಹೀಗಾಗಿ ಈ ಉತ್ಸವ ಸ್ಥಳಕ್ಕೆ ಯಾರೂ ಬರಬಾರದೆಂದು ಪ್ರಕಟಣೆಯಲ್ಲಿ ಸ್ಪಷ್ಟ ಪಡಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

02/01/2021 10:09 pm

Cinque Terre

3.01 K

Cinque Terre

0

ಸಂಬಂಧಿತ ಸುದ್ದಿ