ಮುಲ್ಕಿ: ಬಜಪೆ ಸಮೀಪದ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 2020- 21ನೇ ಸಾಲಿನ ತಿರುಗಾಟಕ್ಕೆ ಚಾಲನೆ ನೀಡಲಾಯಿತು. ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರಿ ದೇವರ ಸನ್ನಿಧಿಯಲ್ಲಿ ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಯಕ್ಷಗಾನ ಮೇಳದ ಕಲಾವಿದ ವೇಷಧಾರಿಗಳಿಗೆ ಗೆಜ್ಜೆ ನೀಡುವ ಮೂಲಕ ಮೇಳಕ್ಕೆ ಚಾಲನೆ ನೀಡಿದರು.
ಗೆಜ್ಜೆ ಕಟ್ಟಿದ ವೇಷಧಾರಿಗಳು ದೇವಳದಲ್ಲಿ ಹಿಮ್ಮೇಳ ಸಹಿತ ಯಕ್ಷಗಾನ ನಾಟ್ಯ ಪ್ರದಕ್ಷಿಣೆ ನಡೆಸಿ ಮೇಳ ಹೊರಡುವ ಸಂಪ್ರದಾಯ ನಡೆಸಿದರು. ಬಳಿಕ ಚೌಕಿ ಪೂಜೆ, 'ಅಶ್ವಮೇಧ' ಯಕ್ಷಗಾನ ಪ್ರದರ್ಶನಗೊಂಡಿತು.
ದೇವಳದ ಮೊಕ್ತೇಸರ ನಾರಾಯಣ ಪೂಜಾರಿ, ಟ್ರಸ್ಟಿ ಜ್ಯೋತಿ ನಾರಾಯಣ, ಮೇಳದ ಪ್ರಬಂಧಕ ರಮೇಶ್ ಕುಲಶೇಖರ, ಪ್ರಮುಖರಾದ ವಿನೋಧರ ಪೂಜಾರಿ, ಶ್ರೀಧರ್ , ದೀಪಕ್ ಕೋಟ್ಯಾನ್, ಮೋಹನ್ ಶೆಟ್ಟಿ, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
06/12/2020 09:06 am