ಮುಲ್ಕಿ: ಮುಲ್ಕಿಯ ಕೊಲಕಾಡಿ ಜೈ ಜಗದಂಬಾ ಯಕ್ಷಗಾನ ಕಲಾ ಮಂಡಳಿಯ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕೊಲಕಾಡಿ ಶ್ರೀಕಾಳಿಕಾಂಬ ದೇವಸ್ಥಾನದ ಕೀರ್ತಿಶೇಷ ಮುಲ್ಕಿ ಒಡೆಯರಬೆಟ್ಟು ಶ್ರೀಧರಾಚಾರ್ಯ ಸಭಾ ವೇದಿಕೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ರಾಮಸೇನಾ ಕರ್ನಾಟಕದ ಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ ವಹಿಸಿ ಮಾತನಾಡಿ, ಕೊರೊನಾ ದಿನಗಳಲ್ಲಿಯೂ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ವಕೀಲ ಎಂ.ಚಿದಾನಂದ ಕೆದಿಲಾಯ, ರಾಮದಾಸ ಶೆಟ್ಟಿ ಬಾಳಿಕೆ ಮನೆ ಪುತ್ತೂರು, ಕೊಲಕಾಡಿ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ,ಕೊಲಕಾಡಿ ಜೈ ಜಗದಂಬಾ ಯಕ್ಷಗಾನ ಕಲಾ ಮಂಡಳಿ ಗೌರವಾಧ್ಯಕ್ಷ ರಾಮಣ್ಣ ಆಚಾರ್ಯ ಕಕ್ವ ಪಲ್ಕೆ, ಅಧ್ಯಕ್ಷರು ಹಾಗೂ ವಕೀಲರಾದ ಪ್ರಶಾಂತ್ ಆಚಾರ್ಯ ಪಂಜಿನಡ್ಕ, ಉಪಾಧ್ಯಕ್ಷ ಕೆ. ಸತೀಶ್ ಆಚಾರ್ಯ ಮಂಗಳೂರು, ಕಾರ್ಯದರ್ಶಿ ವೇಣುಗೋಪಾಲ ಕೆಎಸ್, ಕೋಶಾಧಿಕಾರಿ ದಿವಾಕರ ಆಚಾರ್ಯ ಕೊಲಕಾಡಿ ಉಪಸ್ಥಿತರಿದ್ದರು.
ಈ ಸಂದರ್ಭ ಸಾಧಕರ ನೆಲೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕೊಡಿಪಾಡಿ ಮಾಧವನಗರ ಕೆ.ಚಂದ್ರಶೇಖರ ಆಚಾರ್ಯ ಅವರನ್ನು ಗೌರವಿಸಲಾಯಿತು.
ಬಳಿಕ ಗಾನ ಸಾರಥಿ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಗಾನಭಾರತಿ ಕಾವ್ಯಶ್ರೀ ಅಜೇರು ಸಾರಥ್ಯದಲ್ಲಿ ತೆಂಕು-ಬಡಗು ಶೈಲಿಯ "ಯಕ್ಷಗಾನಾಂಮೃತಧಾರೆ" ನಡೆಯಿತು.
ನ.17ರಂದು ತಂಡದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ "ಭೀಷ್ಮವಿಜಯ"ಹಾಗೂ ನ.25 ರಂದು "ಇಂದ್ರಜಿತು"ನಡೆಯಲಿದೆ.
Kshetra Samachara
28/10/2020 08:03 am