ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೋಕ್ಸೋ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಉಪ್ಪಿನಂಗಡಿ: ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿ ಮುನಾಸಿರ್ನನ್ನು ಉಪ್ಪಿನಂಗಡಿ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.

ಆರೋಪಿ ಮುನಾಸಿರ್ (21) ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲನಿ ನಿವಾಸಿ ಶರೀಫ್ ಎಂಬವರ ಪುತ್ರನಾಗಿದ್ದು, ಈತ ಕಳೆದ ಮೇ 30 ರಂದು ಹಾಗೂ ಜೂ. 7 ರಂದು ಶಾಲೆಗೆ ಹೋಗುತ್ತಿದ್ದ 13 ರ ಹರೆಯದ ತನ್ನ ನೆರೆಮನೆಯ ಬಾಲಕಿಯನ್ನು ಶಾಲೆಗೆ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿ, ಉಪ್ಪಿನಂಗಡಿಯ ಲಾಡ್ಜ್ಗೆ ಕರೆದುಕೊಂಡು ಬಂದು ಹಲವು ಬಾರಿ ಅತ್ಯಾಚಾರವೆಸಗಿದ್ದ.

ಈತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.

Edited By :
Kshetra Samachara

Kshetra Samachara

26/06/2022 09:46 pm

Cinque Terre

4.34 K

Cinque Terre

0

ಸಂಬಂಧಿತ ಸುದ್ದಿ