ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿರುವ 10 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಭಟ್ಕಳ ಮೂಲದ ಆರೋಪಿ ವಿದೇಶದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ. ಕಸ್ಟಮ್ ಅಧಿಕಾರಿಗಳು ಈತನನ್ನು ಪರಿಶೀಲನೆ ನಡೆಸಿದಾಗ ಕಾರ್ಬನ್ ಪೇಪರ್ ಒಳಗೊಂಡ ಪ್ಲಾಸ್ಟರ್ ಹಾಗೂ ಪ್ಯಾಂಟ್ ನೊಳಗೆ ಬಚ್ಚಿಟ್ಟು 200 ಗ್ರಾಂ ತೂಕದ 10 ಲಕ್ಷ ರೂ. ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ತಕ್ಷಣ ಕಸ್ಟಮ್ ಅಧಿಕಾರಿಗಳು ಅಕ್ರಮ ಸಾಗಾಟದ ಚಿನ್ನವನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.
Kshetra Samachara
13/02/2021 03:29 pm