ಬೆಳ್ತಂಗಡಿ: ವಿದ್ಯುತ್ ಕಂಬ ಸ್ಥಳಾಂತರಿಸುವ ಸಂದರ್ಭ ವಿದ್ಯುತ್ ಶಾಕ್ ತಗುಲಿ ಸಿಬ್ಬಂದಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಕಳೆಂಜ ಬಳಿಯ ಶಾಲೆತ್ತಡ್ಕ ಜಂಕ್ಷನ್‌ನಲ್ಲಿ ನಡೆದಿದೆ.
ಮೂಡುಬಿದ್ರೆಯ ಖಾಸಗಿ ವಿದ್ಯುತ್ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿ ಪ್ರತಾಪ್ ಮೂಡುಬಿದ್ರೆ (20) ಮೃತಪಟ್ಟವರು. ಪ್ರತಾಪ್ ವಿದ್ಯುತ್ ಅವಘಡದಿಂದ ಕಂಬದಲ್ಲೇ ಮೃತಪಟ್ಟಿದ್ದು, ಜೊತೆಗಿದ್ದ ನಾಗಪ್ಪ ಮೂಡುಬಿದ್ರೆ ಹಾಗೂ ಕಿಶೋರ್ ಮೂಡುಬಿದ್ರೆ ಅವರಿಗೆ ಗಾಯಗಳಾಗಿವೆ.
ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಕಂಬದಲ್ಲಿ ಪ್ರತಾಪ್ ಕೆಲಸ ನಿರ್ವಹಿಸುತ್ತಿದ್ದರು. ಆಗ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಪ್ರತಾಪ್ ಕಂಬದಲ್ಲೇ ಮೃತಪಟ್ಟಿದ್ದಾರೆ.
Kshetra Samachara
27/11/2020 05:26 pm