ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇರಳಕಟ್ಟೆ: 'ಕೊರೊನಾ ಹಣ' ಆಮಿಷ- ಚಿನ್ನದ ಕರಿಮಣಿ ಸರವನ್ನೇ ಎಗರಿಸಿದ ವಂಚಕ

ಮಂಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊರೊನಾ ಸಲುವಾಗಿ 2 ಲಕ್ಷ ರೂ. ನೀಡುತ್ತಿದ್ದು, ವಾಪಸ್ ಕಟ್ಟಲು ಇರುವುದಿಲ್ಲ ಎಂದು ತಿಳಿಸಿ ಮಹಿಳೆಯೋರ್ವರಿಂದ ನಗದು ಮತ್ತು ಚಿನ್ನದ ಕರಿಮಣಿ ಸರವನ್ನೇ ಎಗರಿಸಿ ಪರಾರಿಯಾದ ಘಟನೆ ನಗರದ ಹೊರವಲಯದ ದೇರಳಕಟ್ಟೆಯಲ್ಲಿ ನಡೆದಿದೆ.

ರಾಕೇಶ್ ಹೆಸರಿನಿಂದ ಪರಿಚಯಿಸಿಕೊಂಡ ವ್ಯಕ್ತಿ ಈ ರೀತಿ ಪಂಗನಾಮ ಹಾಕಿದ್ದಾನೆ. ತೊಕ್ಕೊಟ್ಟು ಒಳಪೇಟೆಯ ಹತ್ತಿರ ಬಂದಿದ್ದ ಅಪರಿಚಿತ ವ್ಯಕ್ತಿ, ಮಹಿಳೆಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ದಿದ್ದು, ಆರಂಭದಲ್ಲಿ 20 ಸಾವಿರ ರೂ. ಪಡೆದಿದ್ದಾನೆ. ಬಳಿಕ ಆ ಮೊತ್ತ ಸಾಲದು ನಿಮ್ಮ ಚಿನ್ನದ ಸರ ಕೊಡಿ 2 ಲಕ್ಷ ರೂ‌. ಕೈಗೆ ಸಿಕ್ಕಿದ ನಂತರ ಬಿಡಿಸಿಕೊಂಡರಾಯಿತು ಎಂದಿದ್ದಾನೆ. ಇದನ್ನೇ ನಂಬಿದ ಮಹಿಳೆ ತನ್ನ ಕುತ್ತಿಗೆಯಲ್ಲಿದ್ದ ಸುಮಾರು 60 ಸಾವಿರ ರೂ. ಬೆಲೆಬಾಳುವ ಚಿನ್ನದ ಕರಿಮಣಿ ಸರವನ್ನೇ ಖದೀಮನ ಕೈಗಿತ್ತಿದ್ದಾರೆ. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಬರುವೆ ಅಂತಾ ತಿಳಿಸಿ ಹೋದ ಕಳ್ಳ ನಾಪತ್ತೆಯಾಗಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಮಹಿಳೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಉಳ್ಳಾಲ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

22/11/2020 07:09 am

Cinque Terre

13.58 K

Cinque Terre

0

ಸಂಬಂಧಿತ ಸುದ್ದಿ