ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಸರಗೋಡು: ಹೊಳೆ ಪಾಲಾಗಿದ್ದ ತರುಣನ ಮೃತದೇಹ ಪತ್ತೆ

ಕಾಸರಗೋಡು: ಚಂದ್ರಗಿರಿ ಹೊಳೆಯಲ್ಲಿ ಸ್ನಾನಕ್ಕಿಳಿದಿದ್ದ ವೇಳೆ ನೀರುಪಾಲಾಗಿದ್ದ ಚೆಮ್ನಾಡ್ ಕೊಂಬನಡ್ಕದ ಮಿಸ್ಬಾಹ್(15) ವಿದ್ಯಾರ್ಥಿಯ ಮೃತದೇಹ ಇಂದು ಪತ್ತೆಯಾಗಿದೆ.

ಸೋಮವಾರ ಮಧ್ಯಾಹ್ನ ಮಿಸ್ಬಾಹ್ ತನ್ನ ಸ್ನೇಹಿತರೊಂದಿಗೆ ಚಂದ್ರಗಿರಿ ಹೊಳೆಯಲ್ಲಿ ಸ್ನಾನಕ್ಕಿಳಿದಿದ್ದ ಎನ್ನಲಾಗಿದೆ. ಈ ಸಂದರ್ಭ ಮಿಸ್ಬಾಹ್ ನೀರುಪಾಲಾಗಿದ್ದು, ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಇಂದು ಸ್ಥಳೀಯರು ಮತ್ತೆ ಶೋಧ ನಡೆಸಿದ್ದು, ತರುಣ ಮುಳುಗಿದ ಸ್ಥಳದಲ್ಲೇ ಮೃತದೇಹ ಪತ್ತೆಯಾಗಿದೆ.

Edited By : Vijay Kumar
Kshetra Samachara

Kshetra Samachara

17/11/2020 05:09 pm

Cinque Terre

7.65 K

Cinque Terre

0

ಸಂಬಂಧಿತ ಸುದ್ದಿ