ಬಂಟ್ವಾಳ: ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರೋಪಾಡಿ ಗ್ರಾಮದ ಕುರೋಮೂಲೆ ಎಂಬಲ್ಲಿ ನಡೆದಿದೆ.
ಕುರೋಮೂಲೆ ನಿವಾಸಿ ರಾಮ ನಾಯ್ಕ ಅವರ ಪುತ್ರ ಸತೀಶ್(39) ಮೃತಪಟ್ಟವರು. ಸತೀಶ್ ಒಂದು ವರ್ಷದಿಂದ ವಿಪರೀತ ಕುಡಿತದ ಚಟ ಹೊಂದಿದ್ದು, ಇದೇ ಚಟ ಜಾಸ್ತಿಯಾಗಿ ಮಾನಸಿಕವಾಗಿ ನೊಂದು ಈ ಹಿಂದೆ 3 ಬಾರಿ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸತೀಶ್ ಅವರ ಪತ್ನಿ ಕೂಲಿ ಕೆಲಸಕ್ಕೆ ಹೋಗಿದ್ದು, ಸತೀಶ್ ತನ್ನ ಸಂಬಂಧಿಕರ ಅಡ್ಯನಡ್ಕದಲ್ಲಿರುವ ಮನೆಗೆ ತಿಥಿ ಕಾರ್ಯಕ್ರಮಕ್ಕೆ ತನ್ನ ತಂದೆಯನ್ನು ಆಟೋರಿಕ್ಷಾದಲ್ಲಿ ಬಿಟ್ಟು ತನ್ನ ಮನೆಗೆ ಬಂದಿದ್ದರು.
ಸತೀಶ್ ಅವರ ತಂದೆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ನೋಡಿದಾಗ ಗೇರುಮರದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
13/11/2020 11:28 pm