ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲ್ಲಪ್ಪಳ್ಳಿ ಬಸ್ ಅಪಘಾತದಲ್ಲಿ ಮೃತಪಟ್ಟ ನಿರ್ವಾಹಕ ಬಂಟ್ವಾಳ ನಿವಾಸಿ

ಬಂಟ್ವಾಳ: ಕರ್ನಾಟಕ- ಕೇರಳ ಗಡಿಭಾಗ ಕಲ್ಲಪ್ಪಳ್ಳಿ ಎಂಬಲ್ಲಿ ಬಸ್ ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, ಇವರಲ್ಲಿ ಬಂಟ್ವಾಳ ನರಿಕೊಂಬು ನಿವಾಸಿ ಶಶಿಧರ ಪೂಜಾರಿ (42) ಸೇರಿದ್ದಾರೆ.

ಇವರು ಬಸ್ ನಿರ್ವಾಹಕರು. ಸುರಕ್ಷಾ ಎಂಬ ಹೆಸರಿನ ಈ ಬಸ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಶಶಿಧರ ಪೂಜಾರಿ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯ್ಲ ಬೋರುಗುಡ್ಡೆ ನಿವಾಸಿ ಶ್ರೀಧರ ಪೂಜಾರಿ ಪುತ್ರ ಶಶಿಧರ ಪೂಜಾರಿ ಮೃತಪಟ್ಟ ವಿಚಾರ ಸಂಜೆ ವೇಳೆ ಮನೆಯವರಿಗೆ ಗೊತ್ತಾಯಿತು. ಪುತ್ತೂರಿನಿಂದ ಕೇರಳದ ಪಾಣತ್ತೂರಿಗೆ ಬಸ್ ತೆರಳುತ್ತಿತ್ತು. ಈ ಸಂದರ್ಭ ಕಲ್ಲಪಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಮೀರಿ ಬಸ್ ಮನೆಯ ಮೇಲೆ ಉರುಳಿ ಬಿದ್ದಿದೆ ಎನ್ನಲಾಗಿದೆ.

ಭೀಕರ ಅಪಘಾತದಿಂದ 7 ಮಂದಿ ಮೃತಪಟ್ಟಿದ್ದು, ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೇರಳದ ಕಾಞಂಗಾಡ್ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

03/01/2021 10:40 pm

Cinque Terre

15.6 K

Cinque Terre

0

ಸಂಬಂಧಿತ ಸುದ್ದಿ