ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಗೋಲ್ಡ್ ಕಂಪನಿಗಳಿಂದ ಬಡವರ ಲೂಟಿ, ಕ್ರಮಕ್ಕೆ ಸರಕಾರಕ್ಕೆ ರೈತಸಂಘದಿಂದ ಒತ್ತಾಯ..

ಪುತ್ತೂರು: ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಎರಡು ಖಾಸಗಿ ಗೋಲ್ಡ್ ಲೋನ್ ಕಂಪನಿಗಳು ಬಡವರನ್ನು ಮತ್ತು ಮಧ್ಯಮವರ್ಗದವರನ್ನು ದಿವಾಳಿಗಳನ್ನಾಗಿ ಮಾಡುತ್ತಿದೆ ಎಂದು ಕರ್ನಾಟಕದ ರಾಜ್ಯ ರೈತ ಸಂಘ, ಹಸಿರುಸೇನೆ ಆರೋಪಿಸಿದೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ,ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಸುರೇಶ್ ಭಟ್ ಕೂಜಂಬೆ ಬಡವರು,ಮಧ್ಯಮ ವರ್ಗದವರು ತಮ್ಮ ಅನಿವಾರ್ಯಕ್ಕಾಗಿ ಮಲಪ್ಪುರಂ ಮತ್ತು ಮುತ್ತೋಟ್ ಫೈನಾನ್ಸ್ ಗಳಲ್ಲಿ ತಮ್ಮ ಆಭರಣಗಳನ್ನು ಅಡವಿಡುತ್ತಿದ್ದಾರೆ. ಆದರೆ ಅಡವಿಟ್ಟ ಕೇವಲ 3 ತಿಂಗಳಿನಲ್ಲೇ ಚಿನ್ನವನ್ನು ಏಲಂ ಮಾಡಿ ದೋಚುವ ಕಾರ್ಯವನ್ನು ಈ ಎರಡು ಖಾಸಗಿ ಸಂಸ್ಥೆಗಳು ಮಾಡುತ್ತಿದೆ. ಈ ಎರಡೂ ಕಂಪನಿಗಳನ್ನು ರಾಜ್ಯದಿಂದ ಹೊರದಬ್ಬಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಅಲ್ಲದೆ ಅಕ್ರಮ-ಸಕ್ರಮ ಮಂಜೂರಾತಿಯಲ್ಲೂ ಹಲವು ಅಕ್ರಮಗಳು ನಡೆದಿದ್ದು, ಇಂಥಹ ಅಕ್ರಮಗಳನ್ನು ಪತ್ತೆಹಚ್ಚಿ ಸರಕಾರ ಭೂಮಿಯನ್ನು ವಾಪಾಸು ಪಡೆದುಕೊಳ್ಳಬೇಕೆಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಡ್ಟುಕೊಂಡು ಸೆಪ್ಟೆಂಬರ್ 12 ರಂದು ರೈತಸಂಘ ವಿಧಾನಸಭೆ ಮುಂದೆ ಪ್ರತಿಭಟನೆಯನ್ನೂ ನಡೆಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Edited By : PublicNext Desk
Kshetra Samachara

Kshetra Samachara

05/09/2022 01:07 pm

Cinque Terre

1.12 K

Cinque Terre

0

ಸಂಬಂಧಿತ ಸುದ್ದಿ