ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬರಡು ಭೂಮಿಯಲ್ಲಿ ಬೆಳೆದು ನಿಂತ ಬಂಗಾರದಂತಹ ಬೆಳೆ

ದಕ್ಷಿಣ ಕನ್ನಡ: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಮುಸ್ಲಿಂ ಧರ್ಮಗುರುವೊಬ್ಬರು ಇದೀಗ ಸಾಕ್ಷಿಯಾಗಿದ್ದಾರೆ.

ಹೌದು! ಕಟ್ಟಡ ನಿರ್ಮಾಣಕ್ಕೆಂದು ಮೀಸಲಿಟ್ಟ ಬರಡು ಜಮೀನಿನ ಪಕ್ಕದಲ್ಲಿ ಬಾಡಿಗೆ ಕೊಠಡಿಯಲ್ಲಿದ್ದ ಮುಹಮ್ಮದ್ ಮುಸ್ಲಿಯಾರ್ ಎಂಬ ಧರ್ಮಗುರು ಖಾಲಿ ಜಾಗದಲ್ಲಿ ತರಕಾರಿ ಬೆಳೆದು ಭೂಮಿಯನ್ನು ಹಸಿರಾಗಿಸಿದ್ದಾರೆ.

ಪಾವೂರು ಗ್ರಾಮದ ಮಲಾರ್ ಅರಸ್ತಾನದಲ್ಲಿರುವ ಅಲ್-ಮುಬಾರಕ್ ಜುಮಾ ಮಸೀದಿಯಲ್ಲಿ ಮುಅಜ್ಜೀನ್ ಆಗಿ ಕೆಲಸ ಮಾಡುತ್ತಿದ್ದ ಲ್ ಮುಸ್ಲಿಯಾರ್, ಮೂರು ವರ್ಷಗಳಿಂದ ಪುತ್ತೂರಿನ ಕಲ್ಲೇಗ ಮಸೀದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರು ಮಲಾರ್ ಟಿಪ್ಪುನಗರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಹಿಂದಿನಿಂದಲೂ ಕೃಷಿ ಪ್ರೇಮಿ ಎನಿಸಿಕೊಂಡಿದ್ದಾರೆ.

ಯಾವ ಮಸೀದಿಯಲ್ಲಿ ಕೆಲಸಕ್ಕೆ ಸೇರುತ್ತಾರೋ ಅಲ್ಲಿ ಖಾಲಿ ಜಾಗವಿದ್ದರೆ ಕೃಷಿ, ಹೂವಿನ ಗಿಡ, ಅಲಂಕಾರಿಕಾ ಗಿಡ ಬೆಳೆಸಬೇಕು ಎನ್ನುವ ತವಕ ಅವರದ್ದು.

ಹಿಂದೆ ಬೆಳ್ಮ, ಬಳಿಕ ಮಲಾರ್ ಮಸೀದಿಯಲ್ಲೂ ಖಾಲಿ ಜಾಗದಲ್ಲಿ ತರಕಾರಿ ಬೆಳೆದು ಮಸೀದಿಗೆ ಸಣ್ಣ ಮಟ್ಟಿನ ಆದಾಯ ಬರುವಂತೆ ಮಾಡಿದ್ದರು. ಪ್ರಸಕ್ತ ತಮ್ಮ ಬಾಡಿಗೆ ಮನೆಯ ಪಕ್ಕದ ಜಮೀನಿನಲ್ಲಿ ತರಕಾರಿ ಬೆಳೆದಿದ್ದಾರೆ.

ತೊಂಡೆಕಾಯಿ, ಮುಳ್ಳುಸೌತೆ, ಹಾಗಲಕಾಯಿ, ಮೂರು ಬಗೆಯ ಸೋರೆಕಾಯಿ, ಹೀರೆಕಾಯಿ, ಬಸಳೆ, ಅಲಸಂದೆ ಬೆಳೆದಿದ್ದಾರೆ. ಇದೀಗ ಉತ್ತಮ ಫಸಲು ಬಂದಿದೆ.

ಮುಹಮ್ಮದ್ ಮುಸ್ಲಿಯಾರ್, ಕೃಷಿ ಕುಟುಂಬದಿಂದ ಬಂದವರು. ಮೂಲತಃ ಹರೇಕಳ ದೇರಿಕಟ್ಟೆ ನಿವಾಸಿ. ಅಜ್ಜ ಕೃಷಿಕರಾಗಿದ್ದು ಅವರಿಂದ ಪ್ರೇರಣೆ ಪಡೆದಿದ್ದರು.

30 ವರ್ಷಗಳ ಹಿಂದೆ 15 ದಿನಗಳ ಕೃಷಿ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅದನ್ನು ಸದುಪಯೋಗಿಸಿಕೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

18/09/2020 06:27 pm

Cinque Terre

9.16 K

Cinque Terre

0

ಸಂಬಂಧಿತ ಸುದ್ದಿ