ಮಂಗಳೂರು: ಬಂಟ್ವಾಳ ತಾಲೂಕಿನ ಅಮ್ಟೂರು ಮಸೀದಿ ಬಳಿಯ ಮನೆಯೊಂದರ ಬಾಗಿಲ ಚಿಲಕ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಗೈದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಅಮ್ಟೂರು ನಿವಾಸಿ ಸುಲೈಮಾನ್ ಎಂಬವರ ಮನೆಯ ಬಾಗಿಲು ಮುರಿದು ಒಳಹೊಕ್ಕ ಕಳ್ಳರು ಸುಮಾರು 12 ಲಕ್ಷ ಮೌಲ್ಯದ 28 ಪವನ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಸುಲೈಮಾನ್ ಅವರ ಮಗಳು ಗಂಡನ ಮನೆಯಿಂದ ಅಮ್ಟೂರು ತಂದೆಯ ಮನೆಗೆ ಬಂದಿರುವಾಗ ಧರಸಿ ಕೊಂಡು ಬಂದಿದ್ದ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ.
ಈ ಸಂಬಂಧ ಸುಲೈಮಾನ್ ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್.ಐ. ಅವಿನಾಶ್ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
07/10/2020 06:13 pm