ಸುಳ್ಯ: KSRTC ಬಸ್‌ನ ಟಯರ್ ಸ್ಫೋಟಗೊಂಡ ಪರಿಣಾಮ ಪ್ರಯಾಣಿಕರು ಗಾಯಗೊಂಡ ಘಟನೆ ದೊಡ್ಡತೋಟ ಸಮೀಪದ ಕಂದಡ್ಕದಲ್ಲಿ ನಡೆದಿದೆ.
ಸುಳ್ಯದಿಂದ ಗುತ್ತಿಗಾರು ಮಾರ್ಗವಾಗಿ ಕೊಲ್ಲಮೊಗ್ರಕ್ಕೆ ಹೋಗುತ್ತಿದ್ದ ಸರಕಾರಿ ಬಸ್ ಕಂದಡ್ಕ ತಲುಪುತ್ತಿದ್ದಂತೆ ಹಿ೦ದುಗಡೆಯ ಟಯರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬಸ್‌ನ ಭಾಗದ ಸೀಟಿನ ಕೆಳ ಬದಿ ತೆರೆದಿದ್ದು, ಅಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
11/12/2024 09:50 pm