ಮಂಗಳೂರು: ಲಾರಿ ಹರಿದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಗರದ ಕಾವೂರು ಜಂಕ್ಷನ್ ಬಳಿ ನಡೆದಿದೆ
ಮೃತ ವ್ಯಕ್ತಿಯನ್ನು ಮಂಗಳೂರಿನ ಬಟ್ಟಗುಡ್ಡ ನಿವಾಸಿ, ಇಲೆಕ್ನಿಷಿಯನ್ ಪ್ರಕಾಶ್ ಅಂಚನ್ (53) ಎಂದು ಗುರುತಿಸಲಾಗಿದ್ದು ಮೃತರು ಚಲಾಯಿಸುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿ ಬಿದ್ದಾಗ ಅದರ ಮೇಲೆ ಲಾರಿ ಹರಿದು ಸವಾರ ಮೃತಪಟ್ಟಿದ್ದಾರೆ.
ಪ್ರಕಾಶ್ ತನ್ನ ಸ್ಕೂಟರ್‌ನಲ್ಲಿ ಬೆಳಗ್ಗೆ ನಗರದ ಹೊರವಲಯದ ಮರಕಡದಿಂದ ಕಾವೂರು ಕಡೆಗೆ ಬರುತ್ತಿದ್ದಾಗ ಕಾವೂರು ಜಂಕ್ಷನ್ ಬಳಿ ಸ್ಕೂಟರ್ ಸ್ಕಿಡ್ ಆಗಿಬಿತ್ತು. ಈ ವೇಳೆ ಲಾರಿ ಅದರ ಮೇಲೆ ಸಂಚರಿಸಿದ ಪರಿಣಾಮ ಪ್ರಕಾಶ್ ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆ ಪ್ರಕಾಶ್ ಅಂಚನ್ ಮೃತಪಟ್ಟರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಸಂಚಾರ ಉತ್ತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Kshetra Samachara
11/12/2024 08:33 am