ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಮನೆ ಟೆರೇಸ್ ನಿಂದ ಬಿದ್ದು ಯುವಕ ಮೃತ್ಯು

ಬಂಟ್ವಾಳ: ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಎಂಬಲ್ಲಿ ಮನೆಯ ತಾರಸಿಯಿಂದ ಬಿದ್ದು ಯುವಕ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಬೆಳ್ತಂಗಡಿ ನಿವಾಸಿ ಪ್ರಸಾದ್ ಆಚಾರ್ಯ ಸಾವನ್ನಪ್ಪಿದವರು. 28 ವರ್ಷದ ಪ್ರಸಾದ್, ಕೇಪುವಿನ ಕುಕ್ಕೆಬೆಟ್ಟು ಎಂಬಲ್ಲಿ ಸಂಬಂಧಿಕರ ಮನೆಗೆ ಬಂದಿದ್ದು, ಅಲ್ಲಿ ಚಿನ್ನದ ಕೆಲಸ ಮಾಡಿದ್ದರು.

ತಡರಾತ್ರಿ ಟೆರೇಸ್ ಮೇಲೆ ಹೋಗಿದ್ದು, ಅಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಟ್ಲ ಕಡೆಗೆ ಬರುತ್ತಿದ್ದಾಗಲೇ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ವಿಟ್ಲ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

24/12/2020 08:29 pm

Cinque Terre

15.34 K

Cinque Terre

0

ಸಂಬಂಧಿತ ಸುದ್ದಿ