ಮಂಡ್ಯ: ಅಂಬಿರಗರಹಳ್ಳಿ ಬಳಿಯ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಬಂದಿರುವ ಜ್ಯೋತಿ ಮೆರವಣಿಗೆಗೆ ಕೆ.ಆರ್ ಪೇಟೆ ಪಟ್ಟಣದಲ್ಲಿ ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ್ರು.
ಭರತ ನಾಟ್ಯ, ಮೂಡಲಪಾಯ ಯಕ್ಷಗಾನ, ಕಂಸಾಳೆ, ತಮಟೆ, ಪೂಜಾ ಕುಣಿತ, ದೊಣ್ಣೆ ವರಸೆ ಸೇರಿದಂತೆ 100ಕ್ಕೂ ಹೆಚ್ಚು ಕಲಾ ತಂಡಗಳು ಜ್ಯೋತಿ ಮೆರವಣಿಗೆಗೆ ಮೆರುಗು ನೀಡ್ತಿವೆ. ಸುಮಾರು 3 ಸಾವಿರ ಕಲಾವಿದರು ಮೆರವಣಿಗೆಯಲ್ಲಿ ತಮ್ಮ ಕಲಾ ಪ್ರಕಾರಗಳೊಂದಿಗೆ ಹೆಜ್ಜೆ ಹಾಕ್ತಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಿರುವ ಮಹದೇಶ್ವರ ಜ್ಯೋತಿ ಮೆರವಣಿಗೆಯೂ ನಾಳೆ ಬೆಳಿಗ್ಗೆ ತ್ರಿವೇಣಿ ಸಂಗಮ ತಲುಪಲಿದೆ.
PublicNext
13/10/2022 08:48 pm