ಮಂಡ್ಯ: ಕಾಂಗ್ರೆಸ್ ಬಣ ರಾಜಕೀಯ ಅದು ಅವರ ಪಕ್ಷಕ್ಕೆ ಸೇರಿದ ವಿಚಾರ. ಡಿನ್ನರ್ ಮೀಟಿಂಗ್ ಸೇರ್ತಾರೋ, ಇನ್ಯಾವುದಕ್ಕೋ ಸೇರ್ತಾರೋ. ಸಚಿವ ಪರಮೇಶ್ವರ್ ಮನೆಯ ಔತಣಕೂಟಕ್ಕೆ ಸೇರುವ ವಿಚಾರಕ್ಕೆ ಕಾರಣ ನೀಡಿದ್ದಾರೆ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಬಗ್ಗೆ ಮಾತನಾಡಲು ಸೇರುತ್ತಿದ್ದೇವೆ ಎಂದು ಅವರು ಹೇಳಿಕೊಂಡಿ ದ್ದಾರೆ ಅಂತ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ರು.
ಮದ್ದೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿನ್ನರ್ ಮೀಟಿಂಗ್ ನಲ್ಲಿ ಸ್ಕಾಲರ್ ಶಿಪ್ ವಿಷಯ ಮಾತನಾಡುತ್ತಾರೆ ಎಂದಾದರೆ ಕ್ಯಾಬಿನೆಟ್ ಇರೋದು ಏಕೆ? ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ವಿಧಾನಸೌಧ ಇರುವುದು ಏತಕ್ಕೆ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನೆ ಮಾಡಿದರು.
ಇವರು ಔತಣಕೂಟ ಮಾಡಿಕೊಂಡು ಏನು ಚರ್ಚೆ ಮಾಡುತ್ತಾರೆ? ವಾಲ್ಮೀಕಿ ನಿಗಮದಲ್ಲಿ ಹೊಡೆದಿರುವ ದುಡ್ಡು ವಾಪಸ್ ಬಂದಿಲ್ಲ ಎಂದು ಚರ್ಚೆ ಮಾಡುತ್ತಾರಾ? ಭೋವಿ ನಿಗಮದ ದುಡ್ಡಿನ ಶೇರ್ ಬಂದಿಲ್ಲ ಎಂದು ಚರ್ಚೆ ಮಾಡುತ್ತಾರಾ? ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕಾದ ವಿಚಾರವನ್ನು ಔತಣಕೂಟದಲ್ಲಿ ಏನು ಚರ್ಚೆ ಮಾಡುತ್ತಾರೆ? ಕ್ಯಾಬಿನೆಟ್, ಮುಖ್ಯಮಂತ್ರಿ ಎಲ್ಲಾ ಇರುವುದು ಏಕೆ? ಅಹಿಂದ ಮಹಾನ್ ನಾಯಕರು ಅಲ್ಲವೇ ಇವರೆಲ್ಲರೂ? ಸ್ಕಾಲರ್ಶಿಪ್ ಬಗ್ಗೆ ಔತಣಕೂಟ ಮಾಡಿಕೊಂಡು ಮಾತಾಡಬೇಕಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
PublicNext
11/01/2025 12:43 pm