ಮಂಡ್ಯ : ಕೊಲೆ ಆರೋಪಿಯನ್ನು ಬಂಧಿಸಲು ಹೋಗಿದ್ದ ಕಾನ್ಸ್ಟೇಬಲ್ ಮೇಲೆ ರೌಡಿಶೀಟರ್ ಡ್ರಾಗನ್‌ನಿಂದ ಅಟ್ಯಾಕ್ ಮಾಡಿದ ಪರಿಣಾಮ ಆರೋಪಿ ಕಾಲಿಗೆ ಸಿಪಿಐ ಶೂಟೌಟ್ ಮಾಡಿರುವ ಘಟನೆ ಮಂಡ್ಯಜಿಲ್ಲೆ ಶ್ರೀರಂಗಪಟ್ಟಣದ ಕರಿಘಟ್ಟದಲ್ಲಿ ನಡೆದಿದೆ.
ಕೆ.ಆರ್.ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊನ್ನೆಯಷ್ಟೇ ರೌಡಿಶೀಟರ್ ಸುಪ್ರೀತ್ ಕೊಲೆಯಾಗಿದ್ದು, ಈ ವ್ಯಾಪ್ತಿಯಲ್ಲಿ ಕ್ರೈಂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಪೊಲೀಸರು ಮುಂದಾಗಿದ್ದರು. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ 19 ವರ್ಷದ ಪ್ರಮೋದ್, ಕರಿಘಟ್ಟದಲ್ಲಿರುವ ಮಾಹಿತಿ ತಿಳಿದು ಆತನನ್ನು ಬಂಧಿಸಲು ಕೆಆರ್‌ಎಸ್ ಪೊಲೀಸರು ಹೋಗಿದ್ರು.
ಈ ವೇಳೆ ಕರೀಘಟ್ಟದ ಬಳಿ ಸಿಪಿಐ ಪುನೀತ್ ತಂಡ ಪ್ರಮೋದ್‌ನನ್ನು ಕಂಡು ಸುತ್ತುವರಿದಾಗ ಏಕಾಏಕಿ ತನ್ನ ಬಳಿ ಇದ್ದ ಡ್ರಾಗನ್‌ನಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇನ್ನು ಸಿಪಿಐ ಪುನೀತ್ ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಿದ್ರು, ಮತ್ತೆ ಅಟ್ಯಾಕ್‌ಗೆ ಮುಂದಾದ ಪ್ರಮೋದನ ಕಾಲಿಗೆ ಆತ್ಮರಕ್ಷಣೆಗಾಗಿ ಕಾಲಿಗೆ ಶೂಟ್ ಮಾಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಘಟನೆ ಬಗ್ಗೆ ವಿವರಣೆ ನೀಡಿದರು. ಹಾಗೂ ಗಾಯಗೊಂಡ ಕಾನ್ಸ್ಟೇಬಲ್ ಶರತ್‌ನ ಆರೋಗ್ಯ ವಿಚಾರಿಸಿದರು. ಇನ್ನು ಬಾಲ ಬಿಚ್ಚಿತ್ತಿರುವ ಪುಡಿರೌಡಿಗಳಿಗೆ ಪೊಲೀಸ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
PublicNext
22/01/2025 09:51 pm