ಮಂಡ್ಯ : ಮಂಡ್ಯದಲ್ಲಿ ತಡರಾತ್ರಿ ಮತ್ತೆ ಮಚ್ಚು ಲಾಂಗ್ ಜಳಪಿಸಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ನನ್ನ ಬರ್ಬರ ಹತ್ಯೆ ಮಾಡಲಾಗಿದೆ. ಮಂಡ್ಯದ ಶ್ರೀರಂಗಪಟ್ಟಣದ ಪಾಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಸುಪ್ಪಿ ಅಲಿಯಾಸ್ ಸುಪ್ರಿತ್ ಹತ್ಯೆಯಾದ ರೌಡಿಶೀಟರ್.
ಗ್ರಾಮದಲ್ಲಿ ತಡರಾತ್ರಿ ಸುಪ್ರಿತ್ ತೋಟದ ಮನೆಗೆ ತೆರಳಿತ್ತಿರುವಾಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.
ಅತಿಯಾದ ರಕ್ತಸ್ರಾವದಿಂದ ಸುಪ್ರಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ರೌಡಿ ಶೀಟರ್ ಗಳ ಬಡಿದಾಟ ಇತ್ತಿಚೆಗೆ ಮಂಡ್ಯದಲ್ಲಿ ಸಾಮಾನ್ಯವಾಗಿದ್ದು ಜನ ಆತಂಕದಲ್ಲಿದ್ದಾರೆ.
ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
19/01/2025 12:44 pm