ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಕ್ಷಿಣ ಭಾರತದ ಮಂಗಳಮುಖಿ ಸಾಧನೆಗೆ ಕ್ಯಾಲಿಫೋರ್ನಿಯ ವಿಧಾನಸಭೆಯಿಂದ ಗೌರವ

ಬೆಂಗಳೂರು: ಆಂಧ್ರಪ್ರದೇಶದಲ್ಲಿ ಹುಟ್ಟಿ ಮಂಗಳಮುಖಿಯರ ಜೀವನ ಸುಧಾರಣೆಗೆ ದುಡಿದ ವ್ಯಕ್ತಿಗಳಲ್ಲಿ ಅಂಜಲಿ ಕೂಡ ಒಬ್ಬರು. ಕರ್ನಾಟಕವೂ ಸೇರಿದಂತೆ ದೇಶದ 21 ರಾಜ್ಯಗಳಲ್ಲಿ ಕೊರೊನಾ ಲಾಕ್‌ಡೌನ್ ವೇಳೆ ತಮ್ಮ "ಪರಿವಾರ್ ಬೇ ಏರಿಯಾ" ಎಂಬ ಸಂಘಟನೆಯ ಮೂಲಕ ಕೆಲಸ ಇಲ್ಲದೇ ಊಟ ಇಲ್ಲದೇ ತೊಂದರೆ ಅನುಭವಿಸಿದ ಮಂಗಳಮುಖಿ ಸಮೂದಾಯದ ಜೊತೆಗೆ ಹಸಿವಿನಿಂದ ತೊಂದರೆ ಪಡುತ್ತಿದ್ದ ಸಾವಿರಾರು ಸಾಮಾನ್ಯ ಜನರಿಗೆ ಅಂಜಲಿ ಅವರ "ಪರಿವಾರ್ ಬೇ ಏರಿಯಾ" ಸಂಘಟನೆ ದೇಶ ವಿದೇಶಗಳಲ್ಲೂ ಸೇವೆ ಸಲ್ಲಿಸಿದೆ ಮತ್ತು ಸೇವೆಯನ್ನು ಮುಂದುವರೆಸಿದೆ.

ಅಂಜಲಿ ಅವರು ಭಾರತದಲ್ಲಿ ಹುಟ್ಟಿ ಶಿಕ್ಷಣ ಪಡೆದು ಕೆನಡಾದಲ್ಲಿ ಕೆಲಸ-ಮಾಡಿ ಸದ್ಯ ಅಮೆರಿಕದ ಪ್ರಜೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಮೆರಿಕ ದೇಶದಲ್ಲೂ ಮಂಗಳಮುಖಿಯರ ಜೀವನ ಸುಧಾರಣೆಗೆ ಶ್ರಮಿಸುತ್ತಿದ್ದಾರೆ. ಮಾತೆ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಾಗ ಅಮೆರಿಕದಿಂದ ಬಂದು ಬೆಂಗಳೂರಿನ ಕನ್ನಡ ಭವನದಲ್ಲಿ ಮಾತೆ ಮಂಜಮ್ಮರನ್ನು ಅಂಜಲಿ ಮತ್ತವರ ಪರಿವಾರ್ ತಂಡ ಸನ್ಮಾನಿಸಿತ್ತು.

ಇದೀಗ ಅಮೇರಿಕಾದಲ್ಲಿ ಇದ್ದುಕೊಂದು ಸೌತ್ ಏಷಿಯಾ ಮಂಗಳಮುಖಿ ಸಮುದಾಯಕ್ಕೆ ದುಡಿಯುತ್ತಿರುವ ಸೇವೆಯನ್ನು ಪರಿಗಣಿಸಿ ಅಮೇರಿಕಾದ ಕ್ಯಾಲಿಫೊರ್ನಿಯ ವಿಧಾನಸಭೆ ಅಂಜಲಿ ರಿಮಿಯವರನ್ನು ಸದನಕ್ಕೆ‌ಆಹ್ವಾನಿಸಿ ಗೌರವಿಸಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Somashekar
PublicNext

PublicNext

28/06/2022 12:28 pm

Cinque Terre

90.07 K

Cinque Terre

4