ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರು ಚಾಲನೆ ಲೈಸೆನ್ಸ್‌ನಿಂದಲೇ ಸಾರಿಗೆ ವಾಹನ ಚಲಾಯಿಸಬಹುದು: ಹೈಕೋರ್ಟ್ ಆದೇಶ

ಬೆಂಗಳೂರು: ಕಾರು ಅಥವಾ ಲಘು ವಾಹನ ಚಾಲನೆ ಪರವಾನಿಗಿ ಹೊಂದಿದವರು ಸಾರಿಗೆ ವಾಹನಗಳನನ್ನು ಕೂಡ ಚಾಲನೆ ಮಾಡಬಹುದು ಎಂದು ಉಚ್ಛ ನ್ಯಾಯಾಲಯ ಆದೇಶ ನೀಡಿದೆ.

ಸರಕು ಸಾಗಣೆ ವಾಹನ ಚಾಲನೆ ಪರವಾನಿಗೆ ಪಡೆದುಕೊಂಡೇ ಸಾರಿಗೆ ವಾಹನ ಚಾಲನೆ ಮಾಡಬೇಕೆಂದು ಓರಿಯಂಟಲ್ ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಹಂಚೇಟಿ ಸಂಜೀವಕುಮಾರ್ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ. ವಾಹನಗಳ ಪ್ರವರ್ಗಕ್ಕೆ ಚಾಲಕ ಪರವಾನಿಗೆ ಹೊಂದಿರುತ್ತಾನೆ ಹೊರತು ವಾಹನಗಳ ವಿಧಗಳಿಗೆ ಅಲ್ಲ. ಕೆಲವೊಂದು ಪ್ರವರ್ಗದಲ್ಲಿ ಹಲವು ರೀತಿಯ ವಾಹನಗಳಿರುತ್ತವೆ.

ಎಲ್‌ಎಂವಿ (Light Motor Vehicle) ಪ್ರವರ್ಗದಲ್ಲಿ ಬರುವ ವಾಹನಗಳಿಗೆ ಒಂದೇ ರೀತಿಯ ಪರವಾನಿಗೆ ಪಡೆಯಬೇಕು. ಪ್ರತಿ ವಿಧದ ವಾಹನಕ್ಕೆ ಪ್ರತ್ಯೇಕ ಚಾಲನೆ ಪರವಾನಿಗೆ ಪಡೆಯುವ ಅಗತ್ಯವಿಲ್ಲ, ಪ್ರವರ್ಗದಲ್ಲಿ ಸಾರಿಗೆ ವಾಹನ ಕೂಡ ಸೇರಿದೆ. ಎಲ್‌ಎಂವಿ ಪರವಾನಗಿ ಹೊಂದಿರುವ ಚಾಲಕ ಪ್ರವರ್ಗದ ಎಲ್ಲಾ ವಾಹನಗಳನ್ನು ಚಾಲನೆ ಮಾಡಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಸರಕು ಸಾಗಣೆ ವಾಹನ ಕೂಡ ಸಾರಿಗೆ ಸಾರಿಗೆ ವಾಹನವಾಗಿದೆ. ಎಲ್‌ಎಂವಿ ಚಾಲನೆ ಪರವಾನಿಗೆ ಹೊಂದಿದವರು ಪ್ರಯಾಣಿಕರಿಗೆ ಬಾಡಿಗೆಗೆ ಬಳಸುವ, ಅದೇ ಮಾದರಿ ಬಳಕೆಗೆ ನೊಂದಣಿಯಾದ ಅಥವಾ ವಿಮೆ ಸೌಲಭ್ಯ ಪಡೆದ ವಾಹನ ಚಾಲನೆ ಮಾಡಬಹುದು. ಸಾರಿಗೆ ವಾಹನ ಚಾಲನೆಗೆ ಪ್ರತ್ಯೇಕವಾದ ಅನುಮೋದನೆ ಪಡೆಯುವ ಅಗತ್ಯವಿಲ್ಲವೆಂದು ಹೈಕೋರ್ಟ್ ಹೇಳಿದೆ.

Edited By : Nagaraj Tulugeri
PublicNext

PublicNext

13/06/2022 10:46 am

Cinque Terre

33.37 K

Cinque Terre

1

ಸಂಬಂಧಿತ ಸುದ್ದಿ