ಡಮಾಸ್ಕಸ್: ಸಿರಿಯಾದಿಂದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಅವರನ್ನು ಪದಚ್ಯುತಗೊಳಿಸಿದ ಕೆಲವು ದಿನಗಳ ನಂತರ, ಡಮಾಸ್ಕಸ್‌ನಲ್ಲಿ ಈಗ ಅಧಿಕಾರದಲ್ಲಿರುವ ಬಂಡುಕೋರರು ಮೊಹಮ್ಮದ್ ಅಲ್-ಬಶೀರ್ ಅವರನ್ನ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಹೆಸರಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಮಧ್ಯಂತರ ಸರ್ಕಾರವು ಮಾರ್ಚ್ 1 ರವರೆಗೆ ಜಾರಿಯಲ್ಲಿರುತ್ತದೆ. “ಮಾರ್ಚ್ 1ರವರೆಗೆ ಮಧ್ಯಂತರ ಸರ್ಕಾರವನ್ನ ನಡೆಸುವ ಕೆಲಸವನ್ನ ಜನರಲ್ ಕಮಾಂಡ್ ನಮಗೆ ವಹಿಸಿದೆ” ಎಂದು ರಾಜ್ಯ ದೂರದರ್ಶನದ ಟೆಲಿಗ್ರಾಮ್ ಖಾತೆಯಲ್ಲಿ ಬಶೀರ್ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
PublicNext
11/12/2024 07:36 am