ಹಾಲಿವುಡ್ ನಾಯಕ ನಟ ಜಾನಿ ಡೆಪ್ ಮಾಜಿ ಪತ್ನಿ ವಿರುದ್ಧ ಹಾಕಿದ್ದ 380 ಕೋಟಿ ಮಾನನಷ್ಟ ಮೊಕದ್ದಮೆಯಲ್ಲಿ ಗೆಲುವು ಕಂಡಿದ್ದಾರೆ. ಆದರೆ, ನ್ಯಾಯಾಲಯ ಜಾನಿ ಡೆಪ್ ಗೂ ದಂಡ ವಿಧಿಸಿದ್ದು, ಮಾಜಿ ಪತ್ನಿಅಂಬರ್ ಹರ್ಡ್ ಗೂ ಸರಿಯಾಗಿಯೇ ದಂಡ ವಿಧಿಸಿದೆ.
ಹೌದು. ಜಾನಿ ಡೆಪ್ ಮತ್ತು ಅಂಬರ್ ಹರ್ಡ್ ಪ್ರೀತಿಸಿಯೇ 2015 ರಲ್ಲಿ ಮದುವೆ ಆದವರು. ಆದರೆ, ಅದು ಬಹಳ ದಿನ ಉಳಿಯಲಿಲ್ಲ. ಒಂದೇ ವರ್ಷಕ್ಕೆ ವಿಚ್ಛೇದನ ಪಡೆದು ದೂರ ಆದರು.
ಆದರೆ, ಅಂಬರ್ ಹರ್ಡ್ ಒಂದು ಲೇಖನ ಬರೆದಿದ್ದರು. ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ಆಗಿದೆ ಅಂತಲೇ ಹೇಳಿದರು. ಅದು ವೈರಲ್ ಆಗಿತ್ತು. ಅದರಿಂದ ಮಾಜಿ ಪತ್ನಿ ವಿರುದ್ಧ ಜಾನಿ ಡೆಪ್ 380 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದರು.
ಈಗ ಇದೇ ಕೇಸ್ ಜಾನಿ ಪರವಾಗಿಯೇ ಬಂದಿದ್ದು, ನ್ಯಾಯಾಲಯ ಜಾನಿ ಡೆಪ್ ಮಾಜಿ ಪತ್ನಿ ಅಂಬರ್ ಹರ್ಡ್‌ಗೆ 10 ಮಿಲಿಯನ್ ನಷ್ಟವನ್ನು ಹಾಗೂ 5 ಮಿಲಿಯನ್ ಡಾಲರ್ ದಂಡವನ್ನ ವಿಧಿಸಿದೆ. ಇದರ ಜೊತೆಗೆ ಜಾನಿ ಡೆಪ್ ಗೆ 2 ಮಿಲಿಯನ್ ದಂಡವನ್ನೂ ನ್ಯಾಯಾಲಯ ವಿಧಿಸಿದೆ. ಜಾನಿ ಈ ತೀರ್ಪನ್ನ ಸ್ವಾಗತಿಸಿದ್ದಾರೆ. ಅಂಬರ್ ಹರ್ಡ್ ಈ ತೀರ್ಪಿನ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
PublicNext
02/06/2022 10:21 am