ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಹನಗಳ 'ನೋಂದಣಿ ಫಲಕ'ಳ ಮೇಲೆ ಯಾವುದೇ ಹೆಸರು, ಚಿನ್ನೆ, ಲಾಂಛನ ಹಾಕುವಂತಿಲ್ಲ

ಬೆಂಗಳೂರು: ರಾಜ್ಯದ ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ಯಾವುದೇ ಸಂಘ, ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನವನ್ನು ಹಾಕುವಂತಿಲ್ಲ. ಒಂದು ವೇಳೆ ಹಾಕಿದರೆ ಅದು ನಿಯಮಬಾಹಿರ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸುತ್ತೋಲೆ ಹೊರಡಿಸಿದ್ದು, 'ವಾಹನಗಳ ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮದ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕಾಗಿರುತ್ತದೆ. ಖಾಸಗಿ ವಾಹನಗಳು ಸರ್ಕಾರದ ಲಾಂಛನ ಮತ್ತು ಹೆಸರುಗಳನ್ನು ವಾಹನಗಳ ಮೇಲೆ ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ. ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ' ಎಂದು ತಿಳಿಸಿದ್ದಾರೆ.

ಈ ಬಗ್ಗೆ ಕೋರ್ಟ್ ಆದೇಶ ಕೂಡ ಇದ್ದು, ಸರ್ಕಾರದ ಲಾಂಛನಗಳನ್ನು ಉಪಯೋಗಿಸದಂತೆ ಹಾಗೂ ವಾಹನಗಳ ಮೇಲೆ ನಿಗಮ, ಮಂಡಳಿ ಮತ್ತು ಸಂಸ್ಥೆಗಳ ಹೆಸರುಗಳನ್ನು ಬರೆದ ಯಾವುದೇ ತರಹದ ಫಲಕ ಅಥವಾ ಬರಹಗಳನ್ನು ಅಳವಡಿಸಬಹಾದು ಎಂದು ಸ್ಪಷ್ಟ ಆದೇಶ ಮಾಡಿದೆ. ಮಾನ್ಯ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ತೆಗೆದುಕೊಂಡು, ತ್ವರಿತವಾಗಿ ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಮಾಹಿತಿ ರೂಪದಲ್ಲಿ ನೀಡಲು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

23/05/2022 07:14 am

Cinque Terre

28.65 K

Cinque Terre

0

ಸಂಬಂಧಿತ ಸುದ್ದಿ