ದಾವಣಗೆರೆ: ಅಕ್ರಮ ಮರಳು ದಂಧೆ ಹಾಗೂ ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಆರೋಪಿಗಳ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಇಮ್ರಾನ್ ಸಿದ್ದಿಕ್ ಹಾಗೂ ಜುಲ್ಫಿಕರ್ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಲಾಗಿದೆ. ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಸಿದ್ದಿಕ್ & ಗ್ಯಾಂಗ್ ಈಗ ಪೊಲೀಸರ ಬಲೆಗೆ ಬಿದ್ದಿದೆ. ಅಶೋಕ್ ಎಂಬುವವರು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಬ್ ಕಾಂಟ್ರಾಕ್ಟ್ ಮೇಲೆ ಮರಳು ವ್ಯಾಪಾರ ಮಾಡುತ್ತಿದ್ದ ಅಶೋಕ್‌ಗೆ ಹತ್ತು ಲಕ್ಷ ರೂಪಾಯಿ ಕೊಡುವಂತೆ ಬೆದರಿಕೆ ಹಾಕಿದ್ದ ಸಿದ್ದಿಕ್ ಮತ್ತು ತಂಡ 8 ಲಕ್ಷ ರೂಪಾಯಿ ಹಣ ಪಡೆದಿತ್ತು. ಇನ್ನೂ 2 ಲಕ್ಷ ರೂ. ನೀಡದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಜೀವ ಬೆದರಿಕೆ ಹಾಕಿದ್ದ ಸಿದ್ದಿಕ್ ಮತ್ತು ತಂಡವು ನೀನು ಮರಳು ವ್ಯಾಪಾರ ಹೇಗೆ ಮಾಡುತ್ತೀಯಾ? ಮಾಡು ನನಗೆ ದೊಡ್ಡವರು ಗೊತ್ತು ಎಂದು ಆವಾಜ್ ಹಾಕಿತ್ತು.
ಈ ಹಿಂದೆ ಮಾಮೂಲಿಗೆ ಬೇಡಿಕೆ ಇಟ್ಟಿದ್ದ ಸಿದ್ದಿಕ್ ನನ್ನು ಪೊಲೀಸರು ಬಂಧಿಸಿ 75 ಲಕ್ಷ ರೂ. ವಶಪಡಿಸಿಕೊಂಡಿದ್ದರು. ಮತ್ತೆ ಕೆಲವರಿಂದ ಹಣ ಪಡೆದಿರುವ ಸಾಧ್ಯತೆ ಇದ್ದು, ಮುಂದೆ ಮತ್ತೆ ದೂರು ದಾಖಲಾಗುವ ಸಾಧ್ಯತೆ ಇದೆ. ಹಲವರಿಗೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದ ಖತರ್ನಾಕ್ ಗ್ಯಾಂಗ್ ಇದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
PublicNext
10/05/2022 04:31 pm