ಬೆಂಗಳೂರು: 2011 ನೇ ಸಾಲಿನ ಗೆಜಿಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಿಂಧುಗೊಳಿಸುವದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಿವಿಲ್ ಸೇವೆಗಳ ಕಾಯ್ದೆ ನೀಡಿದ್ದ ಮದ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಈಗ ಏಪ್ರಿಲ್-04 ರವರೆಗೂ ವಿಸ್ತರಿಸಿದೆ.
ಈ ಸಂಬಂಧ ಸೋಮವಾರ ಮಾರ್ಚ್-28 ರಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ವಿಚಾರಣೆ ಆರಂಭಿಸುತ್ತಿದೆ. ಇಲ್ಲಿ ಮಧ್ಯಂತರ ಆದೇಶದ ಬಗ್ಗೆ ನಿರ್ಧಾರ ಆಗೋವುವರೆಗೂ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನ ವಿತರಿಸಲೇಬಾರದು ಎಂದು ಈಗಾಗಲೇ ಸರ್ಕಾರಕ್ಕೆ ನ್ಯಾಯ ಪೀಠ ಮೌಕಿಕ ಸೂಚನೆ ನೀಡಿದೆ.
ಕೆಎಟಿ ಕ್ರಮ ಪ್ರಶ್ನಿಸಿ ಎ.ಟಿ.ಶ್ರೀನಿವಾಸ್ ಹಾಗೂ ಇತತರು ಅರ್ಜಿ ಸಲ್ಲಿಸಿದ್ದಾರೆ. ಇದನ್ನ ನ್ಯಾಯಮೂರ್ತಿ ಜಿ.ನರೇಂದರ್,ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರ ಪೀಠ ಶುಕ್ರವಾರ ವಿಚಾರಣೆ ನಡೆಸಿದೆ.
PublicNext
26/03/2022 04:44 pm