ಬೆಂಗಳೂರು : ಮದುವೆ ಎಂಬುವುದು ಕ್ರೌರ್ಯಕ್ಕೆ ಪರವಾನಿಗೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಹೌದು ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ವಿವಾಹವು “ಕ್ರೂರ ಮೃಗದಂತೆ ವರ್ತಿಸಲು ಸಿಗುವ ಕ್ರೌರ್ಯಕ್ಕೆ ಪರವಾನಿಗೆಯಲ್ಲ” ಎನ್ನುವ ಮೂಲಕ ಪತಿ ವಿರುದ್ದ ಪತ್ನಿ ಅತ್ಯಾಚಾರ ಆರೋಪ ಮಾಡಬಹುದು ಎಂದು ಹೇಳಿದೆ.ವಿವಾಹ ಎನ್ನುವುದು ಯಾವುದೇ ಪುರುಷನಿಗೆ ವಿಶೇಷವಾದ ಅಧಿಕಾರ ಅಥವಾ ಮಹಿಳೆಯೊಂದಿಗೆ ಕ್ರೂರಿಯಂತೆ ವರ್ತಿಸುವ ಅಧಿಕಾರವನ್ನು ನೀಡುವುದಿಲ್ಲ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಮದುವೆ ನಂತರ ಪುರುಷ ಕ್ರೂರ ಮೃಗದಂತೆ ವರ್ತಿಸುವುದು ಶಿಕ್ಷಾರ್ಹವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.
ಪತ್ನಿಯ ಒಪ್ಪಿಗೆ ವಿರುದ್ಧವಾಗಿ ಪತಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಅದನ್ನು ಅತ್ಯಾಚಾರ ಎಂದು ಕರೆಯದೇ ಇರಲು ಸಾಧ್ಯವಿಲ್ಲ. ಪತಿಯು ತನ್ನ ಹೆಂಡತಿಯ ಮೇಲೆ ನಡೆಸುವ ಇಂತಹ ಲೈಂಗಿಕ ದೌರ್ಜನ್ಯವು ಹೆಂಡತಿಯ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ, ಕಾನೂನು ತ “ಮೌನದ ಧ್ವನಿಗಳನ್ನ ಆಲಿಸುವುದು” ಅನಿವಾರ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
PublicNext
23/03/2022 10:23 pm