ನವದೆಹಲಿ : 2019 ರ ಫೆ.14 ಭಾರತೀಯರಿಗೆ ಅತ್ಯಂತ ಕರಾಳ ದಿನ. ಭಾರತದ ಪ್ರತಿಯೊಬ್ಬರ ಮನೆ ಮನೆಯ ಜನ ಕಣ್ಣೀರಿಟ್ಟ ದಿನ. ವಿಶ್ವದಲ್ಲಿ ಪ್ರೇಮಿಗಳ ದಿನ ಸಂಭ್ರಮಿಸುವ ಸಮಯದಲ್ಲಿ ಭಾರತದಲ್ಲಿ ಉಗ್ರರ ಭೀಕರ ಅಟ್ಟಹಾಸಕ್ಕೆ 40 ಯೋಧರು ಪ್ರಾಣ ಕಳೆದುಕೊಂಡ ಕರಾಳ ದಿನಕ್ಕೆ ಇಂದು 3 ವರ್ಷ.
ಹೌದು ಕಳೆದ ಮೂರು ವರ್ಷದ ಹಿಂದೆ ಜಮ್ಮು, ಕಾಶ್ಮೀರದ ಪುಲ್ವಾಮಾದಲ್ಲಿ ಪಾಪಿ ಪಾಕಿಸ್ತಾನ ಹಾಗೂ ಕುತಂತ್ರಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳ ಅಟ್ಟಹಾಸದಿಂದ 40 ಸಿಆರ್ ಪಿಎಫ್ ಯೋಧರು ಪ್ರಾಣ ಕಳೆದುಕೊಂಡ ಕರಾಳ ದಿನ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಹುತಾತ್ಮ ಯೋಧರ ಶೌರ್ಯ ಮತ್ತು ಅತ್ಯುನ್ನತ ತ್ಯಾಗವು ಪ್ರತಿಯೊಬ್ಬ ಭಾರತೀಯನನ್ನೂ ಬಲಿಷ್ಠ ಮತ್ತು ಸಮೃದ್ಧ ದೇಶ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
‘ಸಿಆರ್ಪಿಎಫ್ ನ ವೀರ ಯೋಧರಿಗೆ ಹೃತ್ಪೂರ್ವಕ ನಮನಗಳು. ನಿಮ್ಮ ತ್ಯಾಗಕ್ಕೆ ದೇಶ ಸದಾ ಋಣಿಯಾಗಿರುತ್ತದೆ. ನಿಮ್ಮ ಶೌರ್ಯವು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಇದೇ ರೀತಿ ಯೋಗಿ ಆದಿತ್ಯನಾಥ್ ಕೆ.ಸುಧಾಕರ್ ಟ್ವೀಟ್ ನಮನ ಸಲ್ಲಿಸಿದ್ದಾರೆ.
PublicNext
14/02/2022 10:10 pm