ನವದೆಹಲಿ: ಅನುಯಾಯಿಗಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರಿಗೆ ಮೂರು ವಾರಗಳ ಪೆರೋಲ್ ಮಂಜೂರು ಮಾಡಲಾಗಿದೆ.
ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಫೆಬ್ರವರಿ 7ರಿಂದ 20 ರವರೆಗೆ ಪೆರೋಲ್ ನೀಡಲಾಗಿದೆ. ಕುಟುಂಬ ಸದಸ್ಯರನ್ನು ಹೊರತುಪಡಿಸಿ, ಡೇರಾ ಮುಖ್ಯಸ್ಥರು ಯಾರನ್ನೂ ಭೇಟಿಯಾಗಲು ಅನುಮತಿ ಇಲ್ಲ. ಅವರನ್ನು ನಾವು ಇಂದು (ಸೋಮವಾರ) ಸಂಜೆಯೊಳಗೆ ಬಿಡುಗಡೆ ಮಾಡುತ್ತೇವೆ. ಆದರೆ ಗುರುಗ್ರಾಮ್‌ನಲ್ಲಿರುವ ರಾಮ್ ರಹೀಮ್ ಅವರ ಫಾರ್ಮ್‌ಹೌಸ್‌ನಲ್ಲಿ ಉಳಿಯಲು ಡೇರಾ ಮುಖ್ಯಸ್ಥರಿಗೆ ಅವಕಾಶ ನೀಡಲಾಗಿದೆ. ಸಿರ್ಸಾಗೆ ಭೇಟಿ ನೀಡಲು ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
PublicNext
07/02/2022 04:12 pm