ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಐಪಿಎಸ್ ಅಧಿಕಾರಿಯನ್ನು ಹೊತ್ತೊಯ್ದ ಯುಪಿ ಪೊಲೀಸರು : ವಿಡಿಯೋ ವೈರಲ್

ಲಖನೌ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದ ಅಡಿಯಲ್ಲಿ ಮಾಜಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.

ಹೌದು ಇದೇ ಆಗಸ್ಟ್ 16ರಂದು ಸುಪ್ರೀಂಕೋರ್ಟ್ ಗೇಟ್ ಮುಂದೆ ಬಾಯ್ಫ್ರೆಂಡ್ ಜತೆ ಬೆಂಕಿ ಹಚ್ಚಿಕೊಂಡು ಮೃತಪಟ್ಟ 24 ವರ್ಷದ ಯುವತಿ, ಸಾಯುವುದಕ್ಕೂ ಮುನ್ನ ಬಹಿರಂಗಪಡಿಸಿದ ರಾಜಕಾರಣಿಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಠಾಕೂರ್ ಅವರ ಹೆಸರೂ ಕೂಡ ಇತ್ತು. ಮೃತ ಯುವತಿ ಬಿಎಸ್ಪಿ ಸಂಸದ ಅತುಲ್ ರಾಯ್ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು 2019ರಲ್ಲಿ ದೂರು ನೀಡಿದ್ದಳು. ಆದರೆ, ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಫೇಸ್ ಬುಕ್ ಲೈವ್ ನಲ್ಲಿ ಕೆಲವು ಹೆಸರುಗಳನ್ನು ಬಹಿರಂಗಪಡಿಸಿ ಯುವತಿ ಸಾವಿನ ಹಾದಿ ಹಿಡಿದಳು. ಠಾಕೂರ್ ಅವರು ಸಂಸದರ ಕುಟುಂಬದ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಯುವತಿ ಆರೋಪಿಸಿದ್ದಳು.

ನಿನ್ನೆ ಶುಕ್ರವಾರ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರನ್ನು ಲಖನೌದಲ್ಲಿ ಬಂಧಿಸಲಾಗಿದೆ. ಈ ವೇಳೆ ಠಾಕೂರ್ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದರೂ ಸಹ ಅವರನ್ನು ಅವರ ಮನೆಯಿಂದ ಸಾರ್ವಜನಿಕರ ಎದುರೇ ಪೊಲೀಸರು ಹೊತ್ತೊಯ್ದರು.

ಪ್ರಾಥಮಿಕ ತನಿಖೆಯ ವೇಳೆ ಠಾಕೂರ್ ವಿರುದ್ಧ ಸಾಕ್ಷಿಗಳು ಲಭ್ಯವಾಗಿವೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ. ನಿನ್ನೆ ನಡೆದ ಇಡೀ ಘಟನೆ ವಿಡಿಯೋ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರ ವರ್ತನೆಗೆ ಸಾಕಷ್ಟು ಆಕ್ರೋಶಗಳು ಕೇಳಿಬಂದಿವೆ. ನನ್ನ ವಿರುದ್ಧದ ಎಫ್ ಐಆರ್ ತೋರಿಸುವವರೆಗೂ ನಾನು ಹೋಗುವುದಿಲ್ಲ ಎಂದರೂ ಠಾಕೂರ್ ಅವರನ್ನು ಪೊಲೀಸರು ಬಲವಂತವಾಗಿ ಎಳೆದೊಯ್ದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Edited By : Nirmala Aralikatti
PublicNext

PublicNext

28/08/2021 08:04 am

Cinque Terre

158.7 K

Cinque Terre

20

ಸಂಬಂಧಿತ ಸುದ್ದಿ