ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಬಿರಿಯಾನಿ ಜಾಹೀರಾತಿನಲ್ಲಿ ಸಾಧುಗಳ ಅವಹೇಳನ : ನಿಯಾಜ್ ಹೊಟೇಲ್ ಗೆ ಬೀಗ

ಬೆಳಗಾವಿ : ಹುಬ್ಬಳ್ಳಿ ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಶಾಖೆ ಹೊಂದಿರುವ " ನಿಯಾಜ್ ಹೋಟೆಲ್ '' ತಮ್ಮ ಬಿರಿಯಾನಿ ಜಾಹೀರಾತಿನಲ್ಲಿ ಹಿಂದೂ ಸಾಧುಗಳನ್ನು ಅವಹೇಳನ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಇಷ್ಟೇ ಅಲ್ಲ 'ಅಹಂ ಬ್ರಹ್ಮಾಸ್ಮಿ.' ಈ ಶ್ಲೋಕದ ಅಯೋಗ್ಯ ರೀತಿಯಲ್ಲಿ ಬಳಕೆ ಮಾಡಿದ್ದು ಹಿಂದೂ ಪರ ಸಂಘಟನೆಗಳನ್ನು ಕೆರಳಿಸಿದೆ.

ಇದರ ವಿರುದ್ಧ ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರವಾಗಿ ಆಕ್ಷೇಪಿಸಿ ಹೊಟೆಲ್ ವಿರುದ್ಧ ಕಠಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರದಲ್ಲಿ ವಿವಿಧ ಕಡೆಗಳಲ್ಲಿರುವ ಈ ನಿಯಾಜ್ ಹೊಟೆಲ್ ಶಾಖೆಗಳಿಗೆ ಬೀಗ ಹಾಕಿ ಪೊಲೀಸ್ ಕಾವಲು ಹಾಕಲಾಗಿದೆ.

ತಮ್ಮ ಬಿರಿಯಾನಿಯ ಪ್ರಸಾರಕ್ಕೆ ಹಿಂದೂ ಸಂತರ ಅವಶ್ಯಕತೆ ಏಕೆ ಉಂಟಾಯಿತು? ಇದಕ್ಕಾಗಿ ಅವರು ತಮ್ಮ ಧರ್ಮಗುರುಗಳನ್ನು ಏಕೆ ಬಳಸಲಿಲ್ಲ ? ಇದರಿಂದ ಹೋಟೆಲ್ ಮಾಲೀಕರ ಮತಾಂಧತೆ ಕಂಡುಬರುತ್ತದೆ. ಹಿಂದೂಗಳನ್ನು `ಅಸಹಿಷ್ಣು' ಎಂದು ನಿಂದಿಸುವವರು ಇದಕ್ಕೆ ಉತ್ತರಿಸಬೇಕು ಎಂದಿವೆ ಹಿಂದೂ ಸಂಘಟನೆಗಳು .

Edited By :
PublicNext

PublicNext

14/08/2021 08:43 am

Cinque Terre

51.93 K

Cinque Terre

43

ಸಂಬಂಧಿತ ಸುದ್ದಿ