ನವದೆಹಲಿ: ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ಪಡೆಯಲು ಯಾವುದೇ ಮೂಲಭೂತ ಹಕ್ಕಿಲ್ಲೆಂದು ದೆಹಲಿ ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಮೂಲಕ ಸಲಿಂಗ ವಿವಾಹದ ನೋಂದಣಿಗೆ ಅವಕಾಶ ಕೋರಿ ದೆಹಲಿ ಹೈಕೋರ್ಟ್ ಗೆ ಸಲ್ಲಿಸಲಾಗಿರುವ ಅರ್ಜಿಯನ್ನು ಕೇಂದ್ರ ಸರ್ಕಾರವು ವಿರೋಧಿಸಿದೆ.
ಸಲಿಂಗ ವಿವಾಹವನ್ನು ನಿಷೇಧಿಸುವುದರಿಂದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ. 'ಮದುವೆ' ಎಂಬುದು ಎರಡು ವ್ಯಕ್ತಿಗಳ ನಡುವೆ ನಡೆಯುವ ಸಾಮಾಜಿಕವಾಗಿ ಮಾನ್ಯತೆ ಪಡೆದ ಸಮ್ಮಿಲನ. ಇದಕ್ಕೆ ವೈಯಕ್ತಿಕ ಕಾನೂನು ಅಥವಾ ಇತರೆ ಕಾನೂನಿನ ಬೆಂಬಲ ಇದೆ ಎಂದು ಕೇಂದ್ರ ವಾದಿಸಿದೆ.
ಭಿನ್ನ ಲಿಂಗದ ವ್ಯಕ್ತಿಗಳ ನಡುವಣ ಮದುವೆಗೆ ಮಾತ್ರ ಕಾನೂನುಬದ್ಧ ಮಾನ್ಯತೆ ನೀಡಿಕೆಯಲ್ಲಿ ಸರ್ಕಾರದ ನ್ಯಾಯಬದ್ಧ ಹಿತಾಸಕ್ತಿ ಅಡಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಭಾರತದ ಕುಟುಂಬದ ಪರಿಕಲ್ಪ ನೆಯು ಸಲಿಂಗ ವ್ಯಕ್ತಿಗಳು ಒಟ್ಟಾಗಿ ಬದುಕುವುದು ಮತ್ತು ಲೈಂಗಿಕ ಸಂಬಂಧವನ್ನು ಹೊಂದು ವುದಕ್ಕಿಂತ ಭಿನ್ನವಾದುದು. ಭಾರತದ ಕೌಟುಂಬಿಕ ವ್ಯವಸ್ಥೆಯಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳು ಎಂಬುದು ಭಿನ್ನ ಪರಿಕಲ್ಪನೆ ಎಂದು ಸರ್ಕಾರ ವಾದಿಸಿದೆ.
PublicNext
26/02/2021 07:33 am