ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮಕ್ಕಳ ಅಪರಾಧ ತಡೆಗಟ್ಟಲು ಸಂತೇಬೆನ್ನೂರು ಪೊಲೀಸರ ವಿಭಿನ್ನ ಪ್ರಯತ್ನ ಹೇಗಿದೆ ಗೊತ್ತಾ...?

ದಾವಣಗೆರೆ: ಇದು ಸಂತೇಬೆನ್ನೂರು ಪೊಲೀಸರ ವಿಶಿಷ್ಟ ಪ್ರಯತ್ನ‌. ಮಕ್ಕಳು ಶಾಲೆಗೆ ಹೋಗುವಾಗ ಆಗುವ ಅಪರಾಧಗಳನ್ನು ತಡೆಗಟ್ಟಲು ಹೊಸ ಉಪಾಯ ಮಾಡಿದ್ದಾರೆ. ಮಾತ್ರವಲ್ಲ ವಿಭಿನ್ನ ಕಾರ್ಯಕ್ರಮಕ್ಕೆ ಕೈಹಾಕಿದ್ದಾರೆ. ಏನಿದು ಅನ್ನೋ ಕುತೂಹಲನಾ ಈ ಸ್ಟೋರಿ ನೋಡಿ.

ಶಾಲೆಗೆ ಹೋಗುವ ಮಕ್ಕಳ ರಕ್ಷಣೆ ಅತಿ ಮುಖ್ಯ. ಪೋಷಕರಿಗಂತೂ ಮಕ್ಕಳು‌ ಮನೆಗೆ ಬರುವವರೆಗೂ ಆತಂಕ, ದುಗುಡ ಇರುತ್ತದೆ. ಮಾತ್ರವಲ್ಲ, ಮಕ್ಕಳ ಅಪಹರಣ ಪ್ರಕರಣಗಳು ಆಗಿದ್ದಾಂಗೆ ವರದಿಯಾಗುತ್ತಲೇ ಇರುತ್ತವೆ.

ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಪೊಲೀಸರು ವಿಡಿಯೋ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನವಳ್ಳಿ ನೇತೃತ್ವದಲ್ಲಿ ಸಿಪಿಐ ಆರ್‌‌. ಆರ್. ಪಾಟೀಲ್, ಪಿಎಸ್ ಐ ಎಸ್. ಎಸ್. ಮೇಟಿ ಅವರು ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಅಣಕು ಪ್ರದರ್ಶನದ ಸಿಡಿ ಮಾಡಿ ಜನರಿಗೆ ತಲುಪಿಸುವ ಮೂಲಕ ವಿನೂತನವಾಗಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮಕ್ಕಳ ಅಪಹರಣದ ವೇಳೆ ಪ್ರಾಥಮಿಕವಾಗಿ ಹೇಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಬೇಕು.‌ ಬಳಿಕ ಗೌಪ್ಯತೆ ಕಾಪಾಡಿಕೊಂಡು ಪೊಲೀಸರು ಹೇಗೆ ರಕ್ಷಣಾ ಕಾರ್ಯಾಚರಣೆ ನಡೆಸಿ ಆರೋಪಿಗಳ ಪತ್ತೆ ಹೇಗೆ ಮಾಡಲಾಗುತ್ತದೆ ಎಂಬ ಕುರಿತು ಸಾಕ್ಷ್ಯಚಿತ್ರದಲ್ಲಿ ಸವಿಸ್ತಾರವಾಗಿ ಮಾಹಿತಿ‌ ನೀಡಲಾಗಿದೆ‌. ಸಂತೇಬೆನ್ನೂರು ಪೊಲೀಸರ ಈ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Edited By : Manjunath H D
PublicNext

PublicNext

28/01/2021 04:43 pm

Cinque Terre

81.29 K

Cinque Terre

8

ಸಂಬಂಧಿತ ಸುದ್ದಿ