ರಿಯಾದ್: ಸೌದಿ ಅರೇಬಿಯಾದ ವಿದ್ಯಾರ್ಥಿನಿಯೊಬ್ಬರಿಗೆ ಟ್ವೀಟ್ ಒಂದು ಸಂಕಷ್ಟ ತಂದಿದೆ. ವಾಸ್ತವವಾಗಿ ಅಲ್ಲಿನ ನ್ಯಾಯಾಲಯವು ಟ್ವಿಟರ್ ಬಳಸಿದ್ದಕ್ಕೆ ವಿದ್ಯಾರ್ಥಿನಿಗೆ 34 ವರ್ಷಗಳ ಶಿಕ್ಷೆ ವಿಧಿಸಿದೆ.
ಸಲ್ಮಾ ಅಲ್ ಶಹಾಬ್ ಶಿಕ್ಷೆಗೆ ಗುರಿಯಾದ ವಿದ್ಯಾರ್ಥಿನಿ. ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ಸಲ್ಮಾ ಅಲ್-ಶಹಾಬ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ದೇಶದಲ್ಲಿ ಸಾರ್ವಜನಿಕ ಅಶಾಂತಿಯನ್ನು ಸೃಷ್ಟಿಸಲು ಅವರು ಕಾರ್ಯಕರ್ತರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆಕೆಯ ವಿರುದ್ಧ ಆರೋಪಗಳು ಕೇಳಿ ಬಂದಿವೆ.
ಬ್ರಿಟನ್ನಲ್ಲಿ ನೆಲೆಸಿದ್ದ ಸಲ್ಮಾ, ಟ್ವಿಟರ್ ಖಾತೆಯನ್ನು ಹೊಂದಿದ್ದರು. ಮಹಿಳಾ ಹಕ್ಕುಗಳ ಪರವಾಗಿ ಅನೇಕ ಟ್ವೀಟ್ಗಳನ್ನು ಮಾಡಿದ್ದರು. ಅಲ್ಲದೆ, ಭಿನ್ನಮತೀಯರ ಟ್ವೀಟ್ಗಳನ್ನು ರೀಟ್ವೀಟ್ ಮಾಡಿದ್ದಕ್ಕೆ ಸಲ್ಮಾ ವಿರುದ್ಧ ಸೌದಿ ಅರೇಬಿಯಾ ಸರ್ಕಾರ ಗರಂ ಆಗಿದೆ. ಸ್ಥಳೀಯ ಭಯೋತ್ಪಾದನಾ ಕೋರ್ಟ್ ತನಿಖೆ ನಡೆಸಿ, ಆಕೆಗೆ 34 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
PublicNext
18/08/2022 01:39 pm