ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನಿಗಳ ಕ್ರೂರ ರಾಕ್ಷಸ ವರ್ತನೆಯನ್ನು ಇನ್ನೂ ಮರೆತಿಲ್ಲ. 90ರ ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾವು ಅನುಸರಿಸುತ್ತಿದ್ದ ಕಾನೂನುಗಳನ್ನು ಈಗ ಜಾರಿಗೆ ತರಲು ತಾಲಿಬಾನಿಗಳು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಹೌದು. ಮಾಧ್ಯಮ ಸಂದರ್ಶವೊಂದರಲ್ಲಿ ತಾಲಿಬಾನ್ ಮುಖಂಡ ಮುಲ್ಲಾ ನೂರೂದ್ಧೀನ್ ತುರಾಬಿ, 'ತಪ್ಪು ಮಾಡುವರನ್ನು ಕೊಲ್ಲುವುದು ಮತ್ತು ಅವರ ಅಂಗಾಂಗಗಳನ್ನು ಕತ್ತರಿಸುವ ಶಿಕ್ಷೆಗಳು ಶೀಘ್ರದಲ್ಲೇ ಮರಳಲಿವೆ. ಆದರೆ ಈ ಹಿಂದೆ ಶಿಕ್ಷೆ ಸಾರ್ವಜನಿಕರ ಮುಂದೆ ನಡೆಯುತ್ತಿತ್ತು. ಆದರೆ ಈ ಬಾರಿ ಶಿಕ್ಷೆ ಸಾರ್ವಜನಿಕವಾಗಿ ಇರಲಾರದು' ಎಂದು ಹೇಳಿದ್ದಾರಂತೆ.
ಸ್ಟೇಡಿಯಂನಲ್ಲಿ ಬಹಿರಂಗವಾಗಿ ಶಿಕ್ಷೆ ನೀಡುವ ಕುರಿತು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿರೋದು ಸತ್ಯ. ಆದರೆ ಯಾರೂ ನಮ್ಮ ಕಾನೂನು ಮತ್ತು ಶಿಕ್ಷೆ ತಪ್ಪೆಂದು ಹೇಳಿಲ್ಲ. ಹಾಗಾಗಿ ಯಾರೂ ನಮ್ಮ ಕಾನೂನುಗಳ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಅಗತ್ಯವಿಲ್ಲ. ನಾವು ಇಸ್ಲಾಂ ಧರ್ಮವನ್ನು ಪಾಲಿಸುತ್ತೇವೆ ಮತ್ತು ಕುರಾನ್ ಆಧಾರದ ಮೇಲೆಯೇ ನಮ್ಮ ಕಾನೂನುಗಳು ರಚನೆಯಾಗಲಿವೆ ಎಂದು ಮುಲ್ಲಾ ನೂರೂದ್ಧೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
90ರ ದಶಕ ಹಿಂದೆ ಅಫ್ಘಾನಿಸ್ತಾನ ತಾಲಿಬಾನಿಗಳ ವಶದಲ್ಲಿತ್ತು. ಅಂದು ತಾಲಿಬಾನಿಗಳನ್ನು ಕಾಬೂಲ್ ನಗರದ ಸ್ಟೇಡಿಯಂ ಮತ್ತು ಈದ್ಗಾ ಮೈದಾನದಲ್ಲಿ ಕ್ರೂರ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಈ ಶಿಕ್ಷೆಗಳನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದರೆ ಈಗ ಅಧಿಕಾರಕ್ಕೆ ಬಂದಿರುವ ತಾಲಿಬಾನಿಗಳು ಆರಂಭದಲ್ಲಿ ನಾವು ಬದಲಾಗಿದ್ದೇವೆ ಎಂದು ಹೇಳಿದ್ದರು. ಈಗ ಮತ್ತೆ ತಮ್ಮ ಹಳೆಯ ಅಮಾನವೀಯ, ಕ್ರೂರ ಶಿಕ್ಷೆಯ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರೋದು ಅಫ್ಘಾನಿಸ್ತಾನದ ಆತಂಕಕ್ಕೆ ಕಾರಣವಾಗಿದೆ.
PublicNext
25/09/2021 06:47 pm