ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸಿರೀಸ್ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. 'ವೀರಪ್ಪನ್; ಹಂಗರ್ ಫಾರ್ ಕಿಲಿಂಗ್' ಟೈಟಲ್ ನಲ್ಲಿ ಅಟ್ಟಹಾಸ ನಿರ್ದೇಶಕ ಎ ಎಂ ಆರ್ ರಮೇಶ್ ವೆಬ್ ಸೀರಿಸ್ ನಿರ್ದೇಶನ ಮಾಡಿದ್ದಾರೆ. ಇದೀಗ ಈ ವೆಬ್ ಸೀರಿಸ್ ಬಿಡುಗಡೆಗೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ವೆಬ್ ಸೀರಿಸ್ ರಿಲೀಸ್ ಗೆ ತಡೆಯಾಜ್ಞೆ ನೀಡುವಂತೆ ಕೋರಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಕೋರ್ಟ್ಗೆ ಮನವಿ ಮಾಡಿದ್ದರು. ಈ ಬಗ್ಗೆ ಮಾತನಾಡಿರುವ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ, 'ನ್ಯಾಯಾಲಯದಲ್ಲಿ ನಮ್ಮ ಅರ್ಜಿಗೆ ತಡೆಯಾಜ್ಞೆ ಸಿಕ್ಕಿದೆ ನಿರ್ದೇಶಕ ಎಎಮ್ಆರ್ ರಮೇಶ್ ಯಾಕೆ ವೀರಪ್ಪನ ಹೆಸರು ಹೇಳಿ ಹಣ ಮಾಡುತ್ತಿದ್ದಾರೆ ಗೊತ್ತಿಲ್ಲ. ಇದರಿಂದ ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳು ಗೌರವಯುತ ಜೀವನಕ್ಕೆ ಧಕ್ಕೆಯಾಗುತ್ತಿದೆ' ಎಂದಿದ್ದಾರೆ.
ವೆಬ್ ಸಿರೀಸ್ ನ ಯಾವುದೇ ಸ್ಕ್ರೀನಿಂಗ್ ಮಾಡುವಂತಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಹಾಕುವಂತಿಲ್ಲ, ಒಟಿಟಿಯಲ್ಲೂ ರಿಲೀಸ್ ಮಾಡುವಂತಿಲ್ಲ ಅಲ್ಲದೇ ಯಾವುದೇ ಭಾಷೆಯಲ್ಲೂ ಈ ಸೀರಿಸ್ ಬಿಡುಗಡೆ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ.
PublicNext
12/01/2021 03:59 pm