ನೆಲಮಂಗಲ: ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಲ್ಲದೆ ಮೃತದೇಹವನ್ನ ಗಂಟೆಗಟ್ಟೆಲೇ ರಸ್ತೆಯಲ್ಲೇ ಬಿಟ್ಟು ಅಮಾನವೀಯತೆ ತೋರಿದ್ದ ಇಬ್ಬರು ಪಿಎಸ್ಐಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ರವಿ ಡಿ.ಚನ್ನಣ್ಣನವರ್ ಆದೇಶ ಹೊರಡಿಸಿದ್ದಾರೆ.
ದೊಡ್ಡಬೆಳವಂಗಲ ಠಾಣೆಯ ಮಂಜೆಗೌಡ ಹಾಗೂ ತ್ಯಾಮಗೊಂಡ್ಲು ವರುಣ್ ಕುಮಾರ್ ಅಮಾನತುಗೊಂಡ ಪಿಎಸ್ಐಗಳು. ನವೆಂಬರ್ 22ರಂದು ವ್ಯಕ್ತಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಜಿಲ್ಲೆ ಎರಡು ಠಾಣೆಯ ಪೊಲೀಸರ ನಡುವೆ ಗಡಿ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿತ್ತು. ಹೀಗಾಗಿ ಎರಡು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಮೃತ ದೇಹವನ್ನ ಗಂಟೆಗಟ್ಟೆಲೇ ರಸ್ತೆಯಲ್ಲಿ ಬಿಟ್ಟಿದ್ದರು. ಈ ಸಂಬಂಧ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಬೆನ್ನಲ್ಲೇ ಎರಡು ಠಾಣೆಯ ಪಿಎಸ್ಐಗಳನ್ನ ರವಿ ಡಿ.ಚನ್ನಣ್ಣನವರ್ ಅಮಾನತುಗೊಳಿಸಿದ್ದಾರೆ.
PublicNext
27/11/2020 09:56 pm