ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರ್ನಬ್​ ಅರೆಸ್ಟ್ ಕೇಸ್‌: ಮಹಾ ಸರ್ಕಾರಕ್ಕೆ ತರಾಟೆ, ಹೈಕೋರ್ಟ್​ಗೆ ಬುದ್ಧಿ ಹೇಳಿದ ಸುಪ್ರೀಂ

ನವದೆಹಲಿ: ರಿಪಬ್ಲಿಕ್​ ಟಿ.ವಿಯ ಸಂಪಾದಕ ಅರ್ನಬ್​ ಗೋಸ್ವಾಮಿ ಅವರನ್ನು ಬಂಧನದ ಸಂಬಂಧ ಸುಪ್ರೀಂಕೋರ್ಟ್ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ ಜಾಮೀನು ನೀಡದ ಮುಂಬೈ ಹೈಕೋರ್ಟ್​ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದೆ.

ಇಂಟೀರಿಯರ್​ ಡಿಸೈನರ್​ ಹಾಗೂ ಅವರ ತಾಯಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಚೋದನೆ ನೀಡಲಾಗಿದೆ ಎಂದು ಅರ್ನಬ್​ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಗೋಸ್ವಾಮಿ ಅವರು ಜಾಮಿನು ಪಡೆದು ಸದ್ಯ ಹೊರ ಬಂದಿದ್ದಾರೆ.

ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, "ಕೆಲವೊಂದು ಉದ್ದೇಶಕ್ಕಾಗಿ ಸರ್ಕಾರಗಳು ಯಾವುದೋ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತವೆ. ಹೀಗಿರುವಾಗ ನ್ಯಾಯಾಲಯಗಳು ಜನರಿಗೆ ಕಿರುಕುಳ ಆಗದಂತೆ ಎಚ್ಚರ ವಹಿಸಬೇಕು. ಕ್ರಿಮಿನಲ್ ಕಾನೂನು ಜನರ ಕಿರುಕುಳಕ್ಕೆ ಅಸ್ತ್ರವಾಗಬಾರದು ಎಂಬುದನ್ನು ನ್ಯಾಯಾಂಗ ಖಚಿತ ಪಡಿಸಬೇಕು'' ಎಂದು ಹೇಳಿದೆ.

ಸರ್ಕಾರ ಬಂಧಿಸಿದೆ ಎಂದ ಮಾತ್ರಕ್ಕೆ ಕೋರ್ಟ್​ಗಳು ಹಿಂದೆ ಮುಂದೆ ವಿಚಾರಿಸದೇ ಸರ್ಕಾರದಂತೆ ವರ್ತಿಸುವುದು ಸರಿಯಲ್ಲ ಎಂದು ಸುಪ್ರೀಂ ತಿಳಿಸಿದೆ.

Edited By : Vijay Kumar
PublicNext

PublicNext

27/11/2020 03:50 pm

Cinque Terre

58.43 K

Cinque Terre

17

ಸಂಬಂಧಿತ ಸುದ್ದಿ