ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರಿಗೂ ಮಾಸ್ಕ್ ದಂಡ ಹಾಕಲು ಟಾರ್ಗೆಟ್

ಬೆಂಗಳೂರು- ಮಹಾನಗರದಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕುವ ಜವಾಬ್ದಾರಿಯನ್ನು ಬಿಬಿಎಂಪಿ ಮಾರ್ಷಲ್ ಗಳಿಗೆ ನೀಡಿತ್ತು. ಈಗ ಆ ಹೊರೆ ಪೊಲೀಸರ ಮೇಲೂ ಬಿದ್ದಿದೆ. ಇಂತಿಷ್ಟು ದಂಡ ಹಾಕಬೇಕೆಂಬ ಗುರಿಯನ್ನೂ ನಿಗದಿಪಡಿಸಲಾಗಿದೆ.

ಈ ಹಿಂದೆ ಮಾರ್ಷಲ್ ಗಳಿಗೆ ಟಾರ್ಗೆಟ್ ನೀಡಲಾಗುತ್ತಿತ್ತು‌‌. ಈಗ ಪೊಲೀಸರಿಗೂ ನೀಡಿದ್ದು ಅವರ ಕೆಲಸದ ಹೊರೆ ಮತ್ತಷ್ಟು ಹೆಚ್ಚಾಗಿದೆ‌‌. ಕಮಿಷನರ್ ಅವರಿಂದ ಈ ಆದೇಶ ಬಂದಿದ್ದು ಮಾಸ್ಕ್ ಹಾಕದ 50 ಜನರಿಗೆ ಪ್ರತಿದಿನ ಕಡ್ಡಾಯವಾಗಿ ದಂಡ ಹಾಕಲು ಸೂಚಿಸಿದ್ದಾರೆ‌. ಇದರಿಂದ ಪೊಲೀಸರು ಮತ್ತಷ್ಟು ಹೈರಾಣಾಗಿದ್ದಾರೆ.‌

Edited By : Nagaraj Tulugeri
PublicNext

PublicNext

05/11/2020 01:03 pm

Cinque Terre

77.99 K

Cinque Terre

2

ಸಂಬಂಧಿತ ಸುದ್ದಿ