ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಬೈಕ್ ಅಡ್ಡಗಟ್ಡಿ ಮಾರಕಾಸ್ತ್ರಗಳಿಂದ ಹಲ್ಲೆ

ಚಿಂತಾಮಣಿ: ತಾಲೂಕು ಅಂಬಾಜಾದುರ್ಗ ಹೋಬಳಿಯ ಉಪ್ಪಾರಪೇಟೆ ಗ್ರಾಮದಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೈಯದ್ ನೌಶಾದ್ ರಾತ್ರಿ ಚಿಂತಾಮಣಿ ನಗರಕ್ಕೆ ಬಂದು ನಂತರ ಮನೆಗೆ ತೆರಳುತ್ತಿದ್ದರು. ಈ ವೇಳೆ ಕೋನಪ್ಪಲ್ಲಿ ಗೇಟ್ ಬಳಿ ಬೈಕ್ ಅಡ್ಡಗಟ್ಡಿ ಅಪರಿಚಿತರು ನೌಶಾದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಸ್ಥಳಿಯರು ಗಾಯಾಳು ಸೈಯದ್ ನೌಶಾದ್‌ರವರನ್ನು ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಚಿಂತಾಮಣಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿ ಗಾಯಾಳು ನೀಡಿದ ದೂರಿನ‌ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By : Manjunath H D
PublicNext

PublicNext

11/09/2022 12:36 pm

Cinque Terre

33.11 K

Cinque Terre

0

ಸಂಬಂಧಿತ ಸುದ್ದಿ