ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ದೇವಸ್ಥಾನಗಳಲ್ಲಿ ಕಳವು ಪ್ರಕರಣ - ಆರೋಪಿ ಬಂಧನ

ಕೋಲಾರ : ಕೆಜಿಎಫ್ - ಕಾಮಸಮುದ್ರಂ, ಬೇತಮಂಗಲ ಮತ್ತು ಆಂಡ್ರಸನ್ ಪೇಟೆ ಪೊಲೀಸ್ ಠಾಣೆಗಳ ಸರಹದ್ದಿನ ೪ ದೇವಸ್ಥಾನಗಳ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ, ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಿಎಸ್ ಪಿ ಪಾಂಡುರಂಗ ನೇತೃತ್ವದ ತಂಡ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಿವಾಸಿ ವಿಜಯ್ (26 ವರ್ಷ) ಎಂಬಾತನನ್ನು ಬಂಧಿಸಿ, ಆತನಿಂದ ಒಟ್ಟು ರೂ. 1,20,000 ಮೌಲ್ಯದ 4 ಬೆಳ್ಳಿ ಕಿರೀಟಗಳು, ಒಂದು ಜೊತೆ ಬೆಳ್ಳಿ ಕಣ್ಣುಗಳು, ಒಂದು ಪಂಚಲೋಹದ ತ್ರಿಶೂಲ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಸ್ಕೂಟಿ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿ ವಿಜಯ್ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : PublicNext Desk
PublicNext

PublicNext

12/12/2024 03:40 pm

Cinque Terre

6.37 K

Cinque Terre

0

ಸಂಬಂಧಿತ ಸುದ್ದಿ