ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಮುರುಡೇಶ್ವರ ಸಮುದ್ರದಲ್ಲಿ ವಿದ್ಯಾರ್ಥಿಗಳು ಸಾವು - ಜಿಲ್ಲಾಡಳಿತದಿಂದ‌ ಅಂತಿಮ ನಮನ

ಕೋಲಾರ - ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಮುಳಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಬಳಿಯ ಮೊರಾರ್ಜಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರ ಪಾರ್ಥಿವ ಶರೀರವನ್ನು ಗುರುವಾರ ಜಿಲ್ಲೆಗೆ ತರಲಾಯಿತು. ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಿಗ್ಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ಬಳಿಕ ಜಿಲ್ಲಾಧಿಕಾರಿಯು ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. ಅಂತ್ಯಕ್ರಿಯೆ ನಡೆಸಲು ಸಹಕಾರ ನೀಡಲು ಜಿಲ್ಲಾಡಳಿತ ತಂಡ ರಚಿಸಿದ್ದು, ಪೊಲೀಸ್‌, ವೈದ್ಯಕೀಯ ಹಾಗೂ ಮೊರಾರ್ಜಿ ವಸತಿ ಶಾಲೆಗಳ ಸಿಬ್ಬಂದಿ ಸೇರಿ ಪ್ರತಿ ತಂಡದಲ್ಲಿ ಹತ್ತು ಮಂದಿ ಇದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಮೃತ ದೇಹಗಳನ್ನು ಆಯಾಯ ಗ್ರಾಮಗಳಿಗೆ ತಲುಪಿಸಿ ಅಂತ್ಯಕ್ರಿಯೆ ನಡೆಯುವವರೆಗೆ ತಂಡಗಳು ಕಾರ್ಯನಿರ್ವಹಿಸಬೇಕಿದೆ.

Edited By : Nagesh Gaonkar
PublicNext

PublicNext

12/12/2024 03:30 pm

Cinque Terre

8.96 K

Cinque Terre

1

ಸಂಬಂಧಿತ ಸುದ್ದಿ