ಬಂಗಾರಪೇಟೆ: ಮಚ್ಚಿನಿಂದ ತಲೆಗೆ ಕೊಚ್ಚಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಸ್ ನಿಲ್ದಾಣ ಹಿಂಭಾಗದಲ್ಲಿ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿ ಬಂಗಾರಪೇಟೆ ತಾಲೂಕು ಕೇಸರನಹಳ್ಳಿ ಗ್ರಾಮದ ನಿವಾಸಿ (31) ವರ್ಷದ ಸುನೀಲ್ ಎಂದು ತಿಳಿದು ಬಂದಿದೆ.
ಮನೆಗೆ ಹೋಗಲು ಬೈಕ್ ಸ್ಟಾರ್ಟ್ ಮಾಡುವಾಗ ಅಪರಿಚಿತ ವ್ಯಕ್ತಿ ಹಿಂದೆಯಿಂದ ಬಂದು ಮಚ್ಚಿನಿಂದ ತಲೆಗೆ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ. ಮಚ್ಚಿನಿಂದ ಹೊಡೆದ ಏಟಿಗೆ ಸುನೀಲ್ ಸ್ಥಳದಲ್ಲೇ ಕುಸಿದಿ ಬಿದ್ದು ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಕೆಜಿಎಪ್ ಜಿಲ್ಲಾ ಎಸ್ಪಿ ಶಾಂತರಾಜ್, ಡಿವೈಎಸ್ಪಿ ಪಾಂಡುರಂಗ ಹಾಗೂ ಬಂಗಾರಪೇಟೆ ಪೊಲೀಸರು ಬೇಟಿ ನೀಡಿ, ಸ್ಥಳ ಪರಿಶಿಲನೇ ನಡೆಸಿ ಕೊಲೆಗಾರನ ಬಂಧನಕ್ಕೆ ಬಲೆ ಬೀಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ದಯಾನಂದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು,ಪೊಲೀಸರ ತನಿಖೆಯಿಂದ ಮಾತ್ರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.
PublicNext
05/12/2024 10:28 am