ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಗಲ್ ಪೇಟೆ ಪೊಲೀಸರಿಂದ‌ ಕುಖ್ಯಾತ ಕಳ್ಳರ ಬಂಧನ

ಕೋಲಾರ : ಗಲ್ ಪೇಟೆ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕುಖ್ಯಾತ‌ ಕಳ್ಳರನ್ನು ಬಂಧಿಸಿದ್ದಾರೆ.

ಕೋಲಾರ ತಾಲೂಕಿನ ಕೂತಾಂಡಹಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ನರೇಂದ್ರ ಅಲಿಯಾಸ್‌ ಜುಟ್ಟೆ, ಗದ್ದೆ ಕಣ್ಣೂರು ಗ್ರಾಮದ ಚಂದನ್‌ ಹಾಗೂ ಕೂತಾಂಡಹಳ್ಳಿ ಗ್ರಾಮದ ಅನಿಲ್‌ ಅಲಿಯಾಸ್‌ ಕೋಳಿ (28) ಬಂಧಿತ ಆರೋಪಿಗಳಾಗಿದ್ದಾರೆ.

ಇವರುಗಳ ಮೇಲೆ ಎರಡು ವರ್ಷಗಳಿಂದ ನಾಲ್ಕು ಕಡೆ ಸರಗಳ್ಳತನ ಮೊಬೈಲ್‌, ಹಣ ಸುಲಿಗೆ ಮಾಡಿದ ಆರೋಪಗಳಿವೆ.

ಚೊಕ್ಕಹಳ್ಳಿಯ ಚಿನ್ಮಯ ಶಾಲೆಯಲ್ಲಿ ₹12 ಲಕ್ಷ ನಗದು ಕಳ್ಳತನ ಮಾಡಿದ್ದರು. ಇನ್ನು ಸರಗಳ್ಳತನ ಪ್ರಕರಣಗಳಲ್ಲಿ ಸುಮಾರು ₹14.5 ಲಕ್ಷ ಮೌಲ್ಯ ವಸ್ತು ಹಾಗೂ ಎರಡು ಬೈಕ್‌ ವಶಕ್ಕೆ ಪಡೆದಿದ್ದೇವೆ' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ ನಿಖಿಲ್ ಮಾಹಿತಿಯನ್ನು ನೀಡಿದ್ದಾರೆ.

Edited By : Vinayak Patil
PublicNext

PublicNext

21/10/2024 10:39 pm

Cinque Terre

21.17 K

Cinque Terre

0

ಸಂಬಂಧಿತ ಸುದ್ದಿ